Skip to main content

samrudhasahitya

ಹಿಂದುಪದ-ಪಾದಶಾಹಿ

Pages: 310
Price: 300

ಮರಾಠರ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಗುಣಗ್ರಹಣೆ ಮಾಡಲು ಇದು ಅತ್ಯಂತ ವಿನೂತನವಾದ, ಅನನ್ಯವಾದ ಆಧಾರ. ಅನೇಕ ವಿದ್ವಾಂಸರು, ಇತಿಹಾಸ ಬಲ್ಲ ಮಹನೀಯರು ಈಗಾಗಲೆ ಮರಾಠಚರಿತ್ರೆಯ ಬಗ್ಗೆ ಸಾಕಷ್ಟು ಬರೆದಿದ್ದಾರಾದರೂ, ಅವುಗಳಲ್ಲಿ ಯಾವೊಂದೂ ವಿವರಗಳ ಮೇಲೇರಿ ಸಮಗ್ರವಾದ ದೃಷ್ಟಿಕೋನದಿಂದ ರಚಿತವಾಗಿಲ್ಲ. ಆಂದೋಲನದ ಪದರಗಳ ಒಳಹೊಕ್ಕು ನೋಡಿಲ್ಲ; ಅಸಲಿಗೆ ಎರಡು ಶತಮಾನಗಳ ಕಾಲ ನಿರಂತರವಾಗಿ ನಡೆದ ಮರಾಠಾಯುದ್ಧಗಳಿಗೆ ಮೂಲ ಕಾರಣ ಏನು, ಅವುಗಳನ್ನು ಪ್ರೇರಿಸಿದ ಸ್ಫೂರ್ತಿತತ್ತ÷್ವ ಯಾವುದು ಎಂಬುದನ್ನು ಈ ಗ್ರಂಥ, ಹಿಂದು ಪದ- ಪಾದಶಾಹಿ ನಿರೂಪಿಸುವಂತೆ ಮತ್ತಾವುದೂ ಹೇಳಿಲ್ಲ […]

ಸನಾತನ

Pages: 160
Price: 160

ಸನಾತನ ಧರ್ಮದ ವಿರುದ್ಧ ಪ್ರತಿನಿತ್ಯವೆಂಬAತೆ ವಿವಿಧ ಸ್ತರಗಳಲ್ಲಿ ಟೀಕೆ, ದಾಳಿ ನಡೆಯುತ್ತಲೇ ಇರುತ್ತದೆ. ಅದು ಈಗ ಮಾತ್ರ ಅಲ್ಲ, ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ಅವ್ಯಾಹತ ವಿದ್ಯಮಾನ. ಮುಂದೆಯೂ ಇಂತಹ ಟೀಕೆ,ವಿಮರ್ಶೆ,ದಾಳಿಗಳಾಗುವುದರಲ್ಲಿ ಅನುಮಾನವಿಲ್ಲ. ಸನಾತನ ಧರ್ಮ ಇಂತಹ ಹಲವು ಅಗ್ನಿಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡೇ ಕಾಲದ ಪ್ರವಾಹದಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿದೆ. ಚಿರಪುರಾತನ ಹಾಗೂ ನಿತ್ಯನೂತನವಾಗಿ ಕಂಗೊಳಿಸುತ್ತ, ಜಗದಗಲ ಬೆಳಕು ಬೀರುತ್ತಲೇ ಇದೆ.ಅದೇ ಸನಾತನ ಧರ್ಮದ ತಾಕತ್ತು. ಅದೇ ಸನಾತನದ ಮಹಿಮೆ. ಅದಕ್ಕೆ ಕಾರಣವೂ ಇದೆ.ಸನಾತನ ಧರ್ಮ ಅಥವಾ ಹಿಂದೂ […]

ಎಚ್ಚರ ಹಿಂದು

Pages: 130
Price: 130

ಈ ರೋಗಮೂಲವನ್ನು ಅರಿತಿರುವ ಕೆಲವು ಮಂದಿ ಒಂದು ಕಾಲದಲ್ಲಿ ವೈಭವಶಾಲಿಯಾಗಿದ್ದು ಈಗ ಅದೃಷ್ಟ ಹೀನವಾಗಿರುವ ಈ ಸಂಕಷ್ಟದ ಕಾಲದಲ್ಲಿ ವಿಜಯಿಯಾಗಲು ಸಾಧ್ರವಾಗುವಂತೆ ಮಾಡಲು ಮುಂದೆ ಬಂದಿರುತ್ತಾರೆ. ಮತ್ತು ಈ ಸಣ್ಣ ಪುಸ್ತಕದ ಲೇಖಕಿ ಅತ್ಯಂತ ಅವಶ್ಯವಾಗಿರುವ ಯೋಚನಾ ಪ್ರವಾಹವನ್ನು ಸೃಷ್ಟಿಸಿದ್ದಾರೆ ಹಾಗೂ ತನ್ಮೂಲಕ ನಮ್ಮ ಈ ಹಿಂದೂ ರಾಷ್ಟ್ರಕ್ಕೆ ಅತ್ಯವಶ್ಯವಾಗಿರುವ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಧಾರಾಳವಾಗಿ ಮೆಚ್ಚುಗೆ ಸಲ್ಲಿಸಬಹುದಾಗಿದೆ. ಅವರು ಒಂದು ದೃಷ್ಟಿಯಿಂದ ಹಿಂದೂ ಸಮೂಹದೊಳಗಿನ ಸಾಮಾನ್ಯ ಕಾರ್ಯಕರ್ತರಿಗಿಂತ ಹೆಚ್ಚು ಅನುಕೂಲದ ಸ್ಥಿತಿಯಲ್ಲಿದ್ದಾರೆ. ಅವರು ರಾಷ್ಟ್ರೀಯತೆಯಿಂದ ಗ್ರೀಕ್ […]

ಗಾಂಧಿ ನಿಜಕ್ಕೂ ಮಹಾತ್ಮರೇ?

Pages: 380
Price: 380

ಗಾಂಧಿಯವರ ಜೀವನದ ಕೊನೆಯ ದಿನಗಳಿಂದಲೂ ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಯೇನೆಂದರೆ, “ಗಾಂಧಿಯವರ ವಿಷಯದಲ್ಲಿ ಎಲ್ಲಿ ತಪ್ಪು ಸಂಭವಿಸಿತು? ಎಲ್ಲ ವಿಧದಲ್ಲಿಯೂ ಅವರು ವಿಫಲರಾಗಿದ್ದು ಹೇಗೆ?” ೧೯೧೮ರ ಸಮಯದಲ್ಲಿಯೂ ಕೂಡ ಅವರು ತಮ್ಮ ಹಲವು ವಿಚಾರಗಳು ಹಾಗೂ ನಿರ್ಧಾರಗಳಲ್ಲಿ ಹಿನ್ನಡೆಯನ್ನು ಕಂಡಿದ್ದಾರೆ. ಅದಾದ ನಂತರದ ಅವರ ಪ್ರತಿಯೊಂದು ಸೋಲು ಕೂಡ ಇದೇ ಪ್ರಶ್ನೆಯನ್ನು ಪರಾಮರ್ಶಿಸಿದೆ. ಭಾರತದ ವಿಭಜನೆಯ ನಂತರವAತೂ ಅವರು ತಮ್ಮ ವೈಫಲ್ಯವನ್ನು ಕುರಿತಾಗಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಅನೇಕ ಬಾರಿ ವಿಚಾರ ವಿಮರ್ಶೆಯನ್ನು ನಡೆಸಿದ್ದಾರೆ. ಆದರೆ ಗಾಂಧಿಯವರಾಗಲಿ […]

ಗಾಂಧಿ ಗೊಂದಲ

Pages: 120
Price: 120

‘ಗಾಂಧಿ ಗೊಂದಲ’ವೆAಬ ಈ ಮುಖ್ಯ ಪುಸ್ತಕವನ್ನು ಗಮನಿಸಬೇಕು. ಸಾವರ್ಕರ್ ಭಾರತ ಕಂಡ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಕವಿತೆಗಳನ್ನು ಇಷ್ಟ ಪಡುವವನು ನಾನು. ಗೋಪಾಲಕೃಷ್ಣ ಅಡಿಗರ ಕವನಗಳಲ್ಲಿ ಬರುವ ವ್ಯಂಗ್ಯ, ಸಾತ್ವಿಕ ಸಿಟ್ಟು, ವಿಶಿಷ್ಟ ರೂಪಕ ಶಕ್ತಿ ಇಲ್ಲಿ ನೆನಪಿಗೆ ಬರುತ್ತದೆ. ಸಾವರ್ಕರ್ ಈ ಲೇಖನಗಳ ಮೂಲಕ ಗಾಂಧಿಯೊಳಗೆ ಇರುವ ಒಬ್ಬ ಹಿಂದುವನ್ನು, ಈ ನೆಲದ ಮೂಲ ಗುಣವನ್ನು ಎಚ್ಚರಿಸಲು ಪ್ರಯತ್ನ ಪಟ್ಟಿದ್ದಾರೆ. ಆ ಕಾಲದಲ್ಲಿ ಈ ಶಕ್ತಿ ಇದ್ದದ್ದು ಸಾವರ್ಕರ್ ಮತ್ತು ಡಾ. ಅಂಬೇಡ್ಕರ್‌ಗೆ ಮಾತ್ರ. […]

ಹಿಂದುಗಳಿಗೆ ಹಿಂದುಸ್ತಾನ ಮುಸಲ್ಮಾನರಿಗೆ ಪಾಕಿಸ್ತಾನ ಎಂದಿದ್ದು ಏಕೆ?

Pages: 160
Price: 160

ಸಮಸ್ಯೆಯ ಸ್ವರೂಪವನ್ನು ಸರಿಯಾಗಿ ಗ್ರಹಿಸಲು ಮತ್ತು ಪರಿಹಾರ ಸೂಚಿಸಲು ಅತ್ಯಂತ ಸ್ಪಷ್ಟವಾದ ಚಿಂತನೆ ಇರಬೇಕು. ಅದನ್ನು ತಿಳಿಹೇಳಲು, ಪಾಂಡಿತ್ಯ, ಪರಿಶ್ರಮಗಳಿರಬೇಕು. ರಾಜಕೀಯ ಚುಕ್ಕಾಣಿ ಹಿಡಿದಿದ್ದ ದೊಡ್ಡವರನ್ನು ಎದುರಿಸುವ ಎಂಟೆದೆ ಇರಬೇಕು. ಈ ಎಲ್ಲ ಗುಣಗಳು ಬಾಬಾ ಸಾಹೇಬರಲ್ಲಿ ಮುಪ್ಪುರಿಗೊಂಡಿದ್ದುವು. ಈ ಗ್ರಂಥದಲ್ಲಿಯೆ ಎಲ್ಲದಕ್ಕಿಂತ ದೊಡ್ಡ ಭಾಗ ನಾಲ್ಕನೆಯದು. ಇದರಲ್ಲಿ ಮುಸಲ್ಮಾನ ಸಮಾಜದಲ್ಲಿ ಬೇರು ಬಿಟ್ಟಿರುವ ಅತ್ಯಂತ ಜುಗುಪ್ಸಾವಹವಾದ ದೋಷಗಳನ್ನು ಬಿಡಿಸಿ ಬಿಡಿಸಿ ಬರೆಯಲಾಗಿದೆ.

ಬದುಕಿನ ತರ್ಕಗಳು

Pages: 120
Price: 120

ಜೀವನವೆಂದರೆ ಪ್ರತಿದಿನವೂ ನಿರ್ಧಾರಗಳ ಪಯಣ.ಪ್ರತಿ ಕ್ಷಣದಲ್ಲೂ ನಾವು ಸಣ್ಣದರಿಂದ ದೊಡ್ಡದರವರೆಗೆ ಅನೇಕ ಆಯ್ಕೆಗಳನ್ನು ಮಾಡುತ್ತೇವೆ. ಆ ನಿರ್ಧಾರಗಳು ಆ ಕ್ಷಣದಲ್ಲಿ ನಮಗೆ ಸರಿಯಾಗಿಯೇ ಕಾಣಿಸುತ್ತವೆ. ಆದರೆ ಬದುಕಿನ ವಾಸ್ತವಿಕತೆ, ಸಮಾಜದ ಚಲನೆ ಮತ್ತು ಪ್ರಪಂಚದ ನಿಯಮಗಳೊಂದಿಗೆ ಅವು ಹೊಂದಿಕೊಂಡಾಗ ಮಾತ್ರ ಅವುಗಳ ಫಲಿತಾಂಶಗಳು ನಮ್ಮನ್ನು ಮುಂದೆ ಕೊಂಡೊಯ್ಯುತ್ತವೆ. ಈ ಕೃತಿಯಲ್ಲಿ ಜೀವನದ ವಿವಿಧ ಆಯಾಮಗಳನ್ನು ತರ್ಕ, ಅನುಭವ ಮತ್ತು ತಾತ್ವಿಕ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಓದುಗರಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟಿಸಿ, ಆಲೋಚನೆಗೆ ಪ್ರೇರೇಪಿಸುವ ಉದ್ದೇಶದಿಂದ ಕೆಲವು […]

ಬೆಳಕಿನ ಹೊಳೆ

Pages: 118
Price: 118

ನಾಡಿನ ಹೆಸರಾಂತ ಸಾಹಿತಿ, ತತ್ತ್ವದರ್ಶನಗಳ ಅಪೂರ್ವ ವ್ಯಾಖ್ಯಾನಕಾರರಾದ ಜಿ. ಬಿ. ಹರೀಶ ಅವರು ರಚಿಸಿರುವ ಸಾ. ಕೃ. ರಾಮಚಂದ್ರ ರಾಯರ ಜೀವನಚರಿತ್ರೆಯನ್ನು ಓದುವಾಗ ಮನಸ್ಸು ಒಂದೇ ವೇಳೆ ರೋಮಾಂಚನಗೊಳ್ಳುತ್ತದೆ; ಜೊತೆಗೆ ಒಂದು ರೀತಿಯ ವಿಷಾದವೂ ಆವರಿಸುತ್ತದೆ. ಅಸಾಮಾನ್ಯ ಪ್ರತಿಭೆ, ಅಪಾರ ಅಧ್ಯಯನಶೀಲತೆ ಮತ್ತು ಜ್ಞಾನಸಂಪತ್ತಿನ ಧನಿಯಾಗಿದ್ದ ರಾಯರು, ಬಹುಶಃ ಅಮೆರಿಕ ಅಥವಾ ಜರ್ಮನಿಯಂತಹ ದೇಶಗಳಲ್ಲಿ ಜನಿಸಿದ್ದರೆ ವಿಶ್ವವಿದ್ಯಾಲಯಗಳ ಇಂಡಾಲಜಿ ಹಾಗೂ ಪ್ರಾಚ್ಯ ಅಧ್ಯಯನ ವಿಭಾಗಗಳಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿ, ಇನ್ನಷ್ಟು ಜಾಗತಿಕ ಖ್ಯಾತಿ ಮತ್ತು ಗೌರವವನ್ನು ಗಳಿಸಬಹುದಿತ್ತು ಎಂಬ ಭಾವನೆ ಸಹಜವಾಗಿ ಮೂಡುತ್ತದೆ. […]

1948 ಬ್ರಾಹ್ಮಣರ ನರಮೇಧ

Pages: 280
Price: 280

೧೯೪೮ರ ಚಿತ್ಪಾವನ ಬ್ರಾಹ್ಮಣ ಸಮುದಾಯದ ಹಾಗೂ ಇತರ ಬ್ರಾಹ್ಮಣರ ನರಮೇಧ ಯಾರ ಕಿವಿಗೂ ಬೀಳಲಿಲ್ಲ, ಕಣ್ಣಿಗೂ ಕಾಣಿಲಿಲ್ಲ. ಸಾವಿರಾರು ಜನರು ಮಾತ್ರ ವಿನಾಕಾರಣ ಅಮಾನುಷವಾದ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಕ್ಕೀಡಾದರು. ಅವರು ಮಾಡಿದ್ದ ಒಂದೇ ಅಪರಾದ ! ಬ್ರಾಹ್ಮಣರಾಗಿ ಹುಟ್ಟಿದ್ದು !! ಅಂದಿನ ಭಾರತೀಯ ಮಾಧ್ಯಮಗಳು ಇದರ ಬಗ್ಗೆ ಚಕಾರ ಎತ್ತಲಿಲ್ಲ. ಈ ನರಮೇಧಗಳಲ್ಲಿ ಕೆಲವಕ್ಕೆ ಮಾತ್ರ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಭಾಗ್ಯ ! ಉಳಿದವು ಎಲ್ಲೋ ಮರೆಯಾಗಿ, ಏನೂ ಆಗಿಯೇ ಇಲ್ಲವೇನೋ ಎಂಬAತೆ ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟಿವೆ. […]

ಬ್ಲಾಕ್ ಅಂಡ್ ವೈಟ್ ಗಾಂಧಿ

Pages: 120
Price: 120

ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರೇ? ಸಾಕ್ಷಿಗಳು ಏನು ಹೇಳುತ್ತವೆ? ಗಾಂಧಿಗೆ ನಾಥೂರಾಂ ಗೋಡ್ಸೆ ಗುಂಡು ಹಾರಿಸಿದ. ಅವರು ಕೆಳಕ್ಕೆ ಬಿದ್ದು ಅಂತಿಮ ಉಸಿರು ಎಳೆದು ಸತ್ತರು. ಇಷ್ಟೇ ನಡೆದಿದ್ದು, ಅವರು ಹೇ ರಾಂ ಎಂದು ಹೇಳಲಿಲ್ಲ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರು ಎನ್ನುವವರೂ ಇದ್ದಾರೆ. ಸಮಕಾಲೀನ ಪತ್ರಿಕೆಗಳು, ಇತಿಹಾಸಕಾರರು ಏನು ಹೇಳುತ್ತಾರೆ ನೋಡೋಣ. ಮರುದಿವಸದ ದಿ ಹಿಂದೂ ಪತ್ರಿಕೆಯ ವರದಿ ಹೀಗಿದೆ, ಅದರಲ್ಲಿ ಗಾಂಧಿ […]