samrudhasahitya

Book Details

1948 ಬ್ರಾಹ್ಮಣರ ನರಮೇಧ

Pages: 280
Price: 280

೧೯೪೮ರ ಚಿತ್ಪಾವನ ಬ್ರಾಹ್ಮಣ ಸಮುದಾಯದ ಹಾಗೂ ಇತರ ಬ್ರಾಹ್ಮಣರ ನರಮೇಧ ಯಾರ ಕಿವಿಗೂ ಬೀಳಲಿಲ್ಲ, ಕಣ್ಣಿಗೂ ಕಾಣಿಲಿಲ್ಲ. ಸಾವಿರಾರು ಜನರು ಮಾತ್ರ ವಿನಾಕಾರಣ ಅಮಾನುಷವಾದ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಕ್ಕೀಡಾದರು. ಅವರು ಮಾಡಿದ್ದ ಒಂದೇ ಅಪರಾದ ! ಬ್ರಾಹ್ಮಣರಾಗಿ ಹುಟ್ಟಿದ್ದು !! ಅಂದಿನ ಭಾರತೀಯ ಮಾಧ್ಯಮಗಳು ಇದರ ಬಗ್ಗೆ ಚಕಾರ ಎತ್ತಲಿಲ್ಲ. ಈ ನರಮೇಧಗಳಲ್ಲಿ ಕೆಲವಕ್ಕೆ ಮಾತ್ರ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಭಾಗ್ಯ ! ಉಳಿದವು ಎಲ್ಲೋ ಮರೆಯಾಗಿ, ಏನೂ ಆಗಿಯೇ ಇಲ್ಲವೇನೋ ಎಂಬAತೆ ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟಿವೆ. ಪಾಠ ಹೇಳಿದ್ದ ಶಿಕ್ಷಕರು, ಪೂಜೆ ಮಾಡಿ ತೀರ್ಥ – ಪ್ರಸಾದ ನೀಡಿದ್ದ ಅರ್ಚಕರು, ಏನೂ ತೆಗೆದುಕೊಳ್ಳದೆ ಔಷಧ ನೀಡಿ ಕಾಯಿಲೆ ಗುಣಪಡಿಸಿದ್ದ ವೈದ್ಯರು, ಕಷ್ಟಕಾಲಕ್ಕೆ ಹಣಸಹಾಯ ಮಾಡಿದ್ದ ಉದಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ದೊಡ್ಡದೊಡ್ಡ ಉದ್ಯಮಿಗಳು ಯಾರನ್ನೂ ಬಿಡಲಿಲ್ಲ. ಎಲ್ಲರನ್ನೂ ಹಿಡಿದು, ಹೊಡೆದು ಕೊಂದರು. ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದರು. ಲೂಟಿ ಮಾಡಿದರು. ಈ ಜನಮಾನಸದಿಂದ ಹೊರಗೆ ಉಳಿದಿದ್ದ ಇಂಥ ಘೋರ, ಹೇಯ ಹತ್ಯಾಕಾಂಡವನ್ನು ಕುರಿತು ಕನ್ನಡದಲ್ಲಿ ಇದೆ ಮೊದಲ ಪುಸ್ತಕ ಎನ್ನಬಹುದು