Skip to main content

samrudhasahitya

ಪರಮವೀರ ವಿಕ್ರಂ ಬಾತ್ರ

Pages: 70
Price: 50

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, […]

ಸಂಘಶಕ್ತಿ

Pages: 156
Price: 150

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್‌ ಕುರಿತು ನಡೆದಷ್ಟು ಪರ ಅಥವಾ ವಿರೋಧದ ಚರ್ಚೆಗಳು ಇನ್ನಾವ ಸಂಘಟನೆಯ ಬಗ್ಗೆಯೂ ಆಗಿರಲಿಕ್ಕಿಲ್ಲ. ಸಂಘ ಪ್ರಾರಂಭವಾಗಿ ಈಗ್ಗೆ 100 ವರ್ಷಗಳ ಬಳಿಕವೂ ಅಂತಹುದೇ ಪರ ಅಥವಾ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನು. ಆರೆಸ್ಸೆಸ್‌ ಅನೇಕರಿಗೆ ಈಗಲೂ ಒಂದು ವಿಸ್ಮಯ. ಕೆಲವರಿಗೆ ಈಗಲೂ ಅರ್ಥವಾಗದ ಸಂಘಟನೆ. ದೂರದಿಂದ ಆರೆಸ್ಸೆಸ್ಸನ್ನು ಕಂಡವರಿಗೆ ಸಂಶಯ, ವಿಸ್ಮಯ, ಅನುಮಾನ ಕಾಡುವುದು ಸಹಜ. ಆದರೆ ಹತ್ತಿರ ಬ೦ದು ಅದರೊಳಗೆ ಇಳಿದವರಿಗೆ ಅಂತಹ ಭಾವನೆಗಳು ಕಾಡಲಾರವು. ಹಿ೦ದು […]

“ಲೈಫ್ ಹೀಗೇನಾ?”

Pages: 156
Price: 140

ನೀವೊಬ್ಬ ಸೈಕಾಲಜಿ ವಿದ್ಯರ‍್ಥಿಯೇ? ಅಥವಾ ಈ ಸೈಕಾಲಜಿ ಹೇಗೆ ಕೆಲಸ ಮಾಡುತ್ತದೆ, ಅದರಿಂದಾಗಿ ಮನುಷ್ಯನ ರ‍್ತನೆಗಳು ಹೇಗೆ ಮೂಡುತ್ತವೆ ಎಂಬ ಆಸಕ್ತಿ ಇದೆಯೇ? ಅಸಹಾಯಕತೆಯಿಂದಲೋ, ನಿಸ್ಸಹಾಯಕತೆಯಿಂದಲೋ ತೀರಾ ಅತಿ ಎನಿಸುವಷ್ಟು ‘ವಿಚಿತ್ರ’, ‘ನಂಬಲಸಾಧ್ಯ’ ಎನಿಸುವಂತಹ, ಗೊಂದಲಗಳಿಂದ ನರ‍್ಧಾರಗಳನ್ನು ತೆಗೆದುಕೊಂಡು, ಗೊಂದಲಗಳಿಂದ ಹೊರ ಬರಲಾಗದ ಸ್ವಭಾವಗಳನ್ನು ಚಿತ್ರಿಸಿರುವ ಕಥೆಗಳಾದರೂ ನಿಮಗೆ ಸ್ವಲ್ಪ ಸಮಯವಿದೆಯೇ? ಹಾಗಾದರೆ ನೀವು ಈ ಪುಸ್ತಕವನ್ನು ಓದಲೇಬೇಕು. ಇಲ್ಲಿರುವುದು ಕಾಲ್ಪನಿಕ ಕಥೆಗಳಲ್ಲ, ಇದು ವ್ಯಕ್ತಿ ಚಿತ್ರಣ, ಜೀವನದ ವಿರ‍್ಯಾಸಗಳು

ನೆತ್ತರು-ತಾವರೆ

Pages: 144
Price: 130

ಪದ್ಯರೂಪದಲ್ಲಿ `ಗೋಮಾಂತಕ’ ಉದಿಸಿತು. ನಿತ್ಯವೂ ಮೈ ಮುರಿಯುವಂತೆ ದುಡಿದ ಮೇಲೆ – ಹಗ್ಗ ಹೊಸೆದೋ, ಎತ್ತಿನಂತೆ ಎಣ್ಣೆಯ ಗಾಣ ಎಳೆದೋ ಕೈಗಳ ಚರ್ಮ ಕಿತ್ತು ಬಂದು ರಕ್ತ ಸುರಿಯುತ್ತಿರುವಾಗ – ಅವರ ಕಾವ್ಯರಚನೆ ಆರಂಭ. ಗೋಡೆಯ ಮೇಲೆ ಪದ್ಯಗಳನ್ನು ಬರೆಯುವುದು; ಕಂಠಪಾಠ ಮಾಡುವುದು, ಆ ಕತ್ತಲಲ್ಲಿ ಅಕ್ಷರಗಳು ನಿಚ್ಚಳವಾಗಿ ಕಾಣವು; ಆದರೂ ಕೂಡಲೇ ಗಟ್ಟಿ ಮಾಡಿಕೊಂಡು ಅಳಿಸಿಬಿಡ ಬೇಕಾಗಿತ್ತು. ಏಕೆಂದರೆ, ಬರೆದುದನ್ನು ಕಾವಲುಗಾರರು ಕಂಡರೆ ಘೋರ ಶಿಕ್ಷೆ; ದಿನಗಟ್ಟಲೆ ಕೈಗಳಿಗೆ `ಗೋಡೆಯ ಬೇಡಿ’ ಹಾಕಿ ನಿಲ್ಲಿಸುತ್ತಿದ್ದರು. ಕಾಲು […]

ಶಿವಾಜಿ ಮತ್ತು ಸುರಾಜ್ಯ

Pages: 300
Price: 400

ರಾಜಸ್ಥಾನದ ರತ್ನಾಕರ ಪಂಡಿತ ಎಂಬ ಕವಿ ಛತ್ರಪತಿ ಶಿವಾಜಿ ಬಗ್ಗೆ ಒಂದೇ ಒಂದು ಶಬ್ದ ಬರೆದಿದ್ದಾನೆ. ಅದು `ದಿಲ್ಲೀಂದ್ರಪದಿಲಪ್ಸವ.’ ಅಂದರೆ, ದೆಹಲಿಯಲ್ಲಿ ಸ್ವರಾಜ್ಯ ಸ್ಥಾಪನೆ ಮಾಡುವ ಮಹತ್ವಾಕಾಂಕ್ಷೆಯುಳ್ಳ ರಾಜ. ಅಗಸ್ತö್ಯ ಮುನಿಗಳು ಒಂದೇ ಆಚಮನದಲ್ಲಿ ಇಡೀ ಸಮುದ್ರವನ್ನು ಕುಡಿದರು ಎಂದು ಹೇಳಲಾಗುತ್ತದೆ. ಹಾಗೆಯೇ, ಪ್ರತಿಭಾನ್ವಿತ ಕವಿ ರತ್ನಾಕರ ಪಂಡಿತ ಒಂದೇ ಶಬ್ದದಲ್ಲಿ ಛತ್ರಪತಿ ಶಿವಾಜಿಯ ವ್ಯಕ್ತಿತ್ವವನ್ನೇ ಹಿಡಿದಿಟ್ಟಿದ್ದಾನೆ. ನಿಜವಾಗಿಯೂ ಶಿವ ಛತ್ರಪತಿಯ ಜೀವನ ಚರಿತ್ರೆಯಲ್ಲಿ ಮಹಾಕಾವ್ಯ, ಮಹಾಗಾಥೆ ಹಾಗೂ ಅಲೌಕಿಕ ಮಹಾಭಾರತವೇ ಒಂದೆಡೆ ಕಲೆತಂತಾಗಿದೆ. ದೇಶದಲ್ಲಿದ್ದ ಗುಲಾಮಿತನದ […]