samrudhasahitya

Book Details

ಎಚ್ಚರ ಹಿಂದು

Pages: 130
Price: 130

ಈ ರೋಗಮೂಲವನ್ನು ಅರಿತಿರುವ ಕೆಲವು ಮಂದಿ ಒಂದು ಕಾಲದಲ್ಲಿ ವೈಭವಶಾಲಿಯಾಗಿದ್ದು ಈಗ ಅದೃಷ್ಟ ಹೀನವಾಗಿರುವ ಈ ಸಂಕಷ್ಟದ ಕಾಲದಲ್ಲಿ ವಿಜಯಿಯಾಗಲು ಸಾಧ್ರವಾಗುವಂತೆ ಮಾಡಲು ಮುಂದೆ ಬಂದಿರುತ್ತಾರೆ. ಮತ್ತು ಈ ಸಣ್ಣ ಪುಸ್ತಕದ ಲೇಖಕಿ ಅತ್ಯಂತ ಅವಶ್ಯವಾಗಿರುವ ಯೋಚನಾ ಪ್ರವಾಹವನ್ನು ಸೃಷ್ಟಿಸಿದ್ದಾರೆ ಹಾಗೂ ತನ್ಮೂಲಕ ನಮ್ಮ ಈ ಹಿಂದೂ ರಾಷ್ಟ್ರಕ್ಕೆ ಅತ್ಯವಶ್ಯವಾಗಿರುವ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಧಾರಾಳವಾಗಿ ಮೆಚ್ಚುಗೆ ಸಲ್ಲಿಸಬಹುದಾಗಿದೆ.

ಅವರು ಒಂದು ದೃಷ್ಟಿಯಿಂದ ಹಿಂದೂ ಸಮೂಹದೊಳಗಿನ ಸಾಮಾನ್ಯ ಕಾರ್ಯಕರ್ತರಿಗಿಂತ ಹೆಚ್ಚು ಅನುಕೂಲದ ಸ್ಥಿತಿಯಲ್ಲಿದ್ದಾರೆ. ಅವರು ರಾಷ್ಟ್ರೀಯತೆಯಿಂದ ಗ್ರೀಕ್ ವ್ಯಕ್ತಿ. ಆಕೆ ಭಾಗಶ: ಹಿಂದೂ ಕಲೆ, ವಿಚಾರ ಮತ್ತು ” ಧರ್ಮ” ವನ್ನು ಮೆಚ್ಚಿಕೊಂಡಿದ್ದರಿAದ, ಹಾಗೂ ಭಾಗಶ: ಹೆಚ್ಚು ಗಾಢವಾದ ಕಾರಣಗಳಿಂದಾಗಿ ನಮ್ಮ ಸಮಾಜದತ್ತ ಆಕರ್ಷಿತರಾದರು ಹಾಗೂ ತನ್ನ ಜೀವನದ ಉಳಿದ ಭಾಗಕ್ಕೆ ನಾವು ” ಹಿಂದುತ್ವ” ಎಂದು ಕರೆಯುವಂತಹದನ್ನು ಅಂಗೀಕರಿಸಿದರು.
ಆದರೆ ಐರೋಪ್ಯರಾಗಿದ್ದುದರಿಂದ ಸ್ವಾಭಾವಿಕವಾಗಿ ಹಿಂದುಗಳ ಪರಿಸ್ಥಿತಿಯನ್ನು ಒಳಗಿದ್ದುಕೊಂಡೇ ನಿರ್ಲಿಪ್ತವಾಗಿ ಅಧ್ಯಯನ ಮಾಡಬಲ್ಲವರಾದರು. ಮತ್ತು ಈ ಪುಸ್ತಕವು ಆಕೆ ಕೈಗೊಂಡ ಪರಿಪಕ್ವ ಹಾಗೂ ವಿಚಾರಪೂರ್ಣ ನಿರ್ಣಯಗಳನ್ನು ಒಳಗೊಂಡಿದೆ. ಈ ನಿರ್ಣಯಗಳು ಜನ್ಮಜಾತ ಹಿಂದುವೊಬ್ಬರು ತಳೆದ ಅಪೂರ್ಣ ನಿಲುವಿನ ಫಲವೆಂಬುದಾಗಿ ಯಾವ ರೀತಿಯಲ್ಲೂ ತಿಳಿದುಕೊಳ್ಳಲು ಸಾಧ್ಯವಿಲ್ಲ.
ಈ ಅತ್ಯಂತ ಪ್ರೇರಣಾದಾಯಕ ಹಾಗೂ ವಿಚಾರಪ್ರಚೋದಕ ಹಿಂದುಗಳು ತಾವೀಗ ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು, ಮತ್ತು ಒಂದು ರಾಷ್ಟ್ರವಾಗಿ ತಮ್ಮ ಅಸ್ತಿತ್ವಕ್ಕೇ ಎಂತಹ ಅಪಾಯಗಳು ಬೆದರಿಕೆಯೊಡ್ಡಿವೆ ಎಂಬುದನ್ನು ಮನಗಾಣುವಂತೆ ಮಾಡುವುದು; ಅದು ಅವರನ್ನು ಸರಿಯಾದ ರಾಷ್ಟ್ರೀಯ ಚಿಂತನೆಗೆ ಹಚ್ಚುವುದು. ಮತ್ತು ಈ ದೇಶದ ಉದ್ದಗಲಕ್ಕೂ ಈ ಹೊಸ ವರ್ತನೆಯು ಹೃತ್ಪೂರ್ವಕವಾಗಿ ಅಂಗೀಕೃತವಾದಲ್ಲಿ ಅದು ಅವರನ್ನು ಎದ್ದು ನಿಲ್ಲಿಸಿ ತಮ್ಮ ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿಪಾದಿಸಲು ಸಹಾಯ ಮಾಡುವುದು ಹಾಗೂ ಇದನ್ನು ಜಗತ್ತು ನಿರ್ಲಕ್ಷಿಸಲು ಸಾಧ್ಯವಾಗದು.