samrudhasahitya

Book Details

ಗಾಂಧಿ ಗೊಂದಲ

Pages: 120
Price: 120

‘ಗಾಂಧಿ ಗೊಂದಲ’ವೆAಬ ಈ ಮುಖ್ಯ ಪುಸ್ತಕವನ್ನು ಗಮನಿಸಬೇಕು. ಸಾವರ್ಕರ್ ಭಾರತ ಕಂಡ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಕವಿತೆಗಳನ್ನು ಇಷ್ಟ ಪಡುವವನು ನಾನು. ಗೋಪಾಲಕೃಷ್ಣ ಅಡಿಗರ ಕವನಗಳಲ್ಲಿ ಬರುವ ವ್ಯಂಗ್ಯ, ಸಾತ್ವಿಕ ಸಿಟ್ಟು, ವಿಶಿಷ್ಟ ರೂಪಕ ಶಕ್ತಿ ಇಲ್ಲಿ ನೆನಪಿಗೆ ಬರುತ್ತದೆ.
ಸಾವರ್ಕರ್ ಈ ಲೇಖನಗಳ ಮೂಲಕ ಗಾಂಧಿಯೊಳಗೆ ಇರುವ ಒಬ್ಬ ಹಿಂದುವನ್ನು, ಈ ನೆಲದ ಮೂಲ ಗುಣವನ್ನು ಎಚ್ಚರಿಸಲು ಪ್ರಯತ್ನ ಪಟ್ಟಿದ್ದಾರೆ. ಆ ಕಾಲದಲ್ಲಿ ಈ ಶಕ್ತಿ ಇದ್ದದ್ದು ಸಾವರ್ಕರ್ ಮತ್ತು ಡಾ. ಅಂಬೇಡ್ಕರ್‌ಗೆ ಮಾತ್ರ. ಏಕೆಂದರೆ ಅವರು ಗಾಂಧಿಯಿAದ ದೂರವಿದ್ದೂ, ತೀವ್ರವಾಗಿ ಗಾಂಧಿಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದವರು. ಗಾಂಧಿ ಅನುಯಾಯಿಯಗಳು, ಸ್ವತಃ ಗಾಂಧಿ ಕೂಡ ಇವರಿಬ್ಬರನ್ನು ಅರ್ಥ ಮಾಡಿಕೊಳ್ಳಲಿಲ್ಲ ಎನ್ನುವುದು ಇಪ್ಪತ್ತನೆಯ ಶತಮಾನದ ಭಾರತದ ದೊಡ್ಡ ದುರಂತ,
ರಾಜಕಾರಣಿಯದು. ಮುಂತಾದ ಇದಕ್ಕೆ ಕಾರಣವೆಂದರೆ, ನಾನು ಆಲೋಚಿಸಿದಂತೆ ಗಾಂಧಿಯೊಳಗೆ ಇಬ್ಬಂದಿ ವ್ಯಕ್ತಿತ್ವ ಕೆಲಸ ಮಾಡಿತು. ಒಂದು ಸಂತನದು, ಇನ್ನೊಂದು ಎರಡನ್ನೂ ಅವರು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಲು ಹೆಣಗುತ್ತಿದ್ದರು, ಬಹಳ ಸಲ ಅದರಲ್ಲಿ ಸೋತರು. ‘ಗಾಂಧಿ ಗೊಂದಲ’ ಪುಸ್ತಕ ನಮ್ಮ ಕಾಲವನ್ನು ರೂಪಿಸುತ್ತಿರುವ ಹಿಂಸೆ-ಅಹಿAಸೆ, ಹಿಂದು ಧರ್ಮ-ಹಿಂದುತ್ವ, ಎಡ-ಬಲ, ಪ್ರಗತಿಪರ-ಪ್ರಗತಿವಿರೋಧಿ ಚರ್ಚೆಗಳನ್ನು ಇನ್ನಷ್ಟು ಆಳವಾಗಿ, ಅರ್ಥಪೂರ್ಣವಾಗಿ ಮಾಡಲು ಸಹಾಯ ಮಾಡಲಿ ಎಂದು ಆಶಿಸುತ್ತೇನೆ. ವಿಷಯ ಪ್ರತಿಪಾದನೆಯ ವೈಚಾರಿಕ ಸ್ಪಷ್ಟತೆಗಾಗಿ ಭಾಷೆ, ಶೈಲಿಯನ್ನು ಎಷ್ಟು ಸೊಗಸಾಗಿ ಬಳಸಬಹುದು ಎಂಬುದಕ್ಕೆ ದೀರ್ಘ ಕಾಲದವರೆಗೆ ಉತ್ತಮ ಉದಾಹರಣೆಯಾಗಿ ವೀರ ಸಾವರ್ಕರ್ ಅವರ ‘ಗಾಂಧಿ ಗೊಂದಲ’ ಕೃತಿ ನಿಲ್ಲಬಲ್ಲದು. ವೀರ ಸಾವರ್ಕರ್ ಸಾಹಿತ್ಯವನ್ನು ಕನ್ನಡಕ್ಕೆ ತರುವ ನಮ್ಮ ಪ್ರಯತ್ನದಲ್ಲಿ ಇದು ಒಂದು ಹೊಸ ಕುಸುಮ, ಒಪ್ಪಿಸಿಕೊಳ್ಳಿ.