samrudhasahitya

Book Details

ನೆತ್ತರು-ತಾವರೆ

Pages: 144
Price: 130

ಪದ್ಯರೂಪದಲ್ಲಿ `ಗೋಮಾಂತಕ’ ಉದಿಸಿತು.
ನಿತ್ಯವೂ ಮೈ ಮುರಿಯುವಂತೆ ದುಡಿದ ಮೇಲೆ – ಹಗ್ಗ ಹೊಸೆದೋ,
ಎತ್ತಿನಂತೆ ಎಣ್ಣೆಯ ಗಾಣ ಎಳೆದೋ ಕೈಗಳ ಚರ್ಮ ಕಿತ್ತು ಬಂದು ರಕ್ತ
ಸುರಿಯುತ್ತಿರುವಾಗ – ಅವರ ಕಾವ್ಯರಚನೆ ಆರಂಭ. ಗೋಡೆಯ ಮೇಲೆ
ಪದ್ಯಗಳನ್ನು ಬರೆಯುವುದು; ಕಂಠಪಾಠ ಮಾಡುವುದು, ಆ ಕತ್ತಲಲ್ಲಿ ಅಕ್ಷರಗಳು
ನಿಚ್ಚಳವಾಗಿ ಕಾಣವು; ಆದರೂ ಕೂಡಲೇ ಗಟ್ಟಿ ಮಾಡಿಕೊಂಡು ಅಳಿಸಿಬಿಡ
ಬೇಕಾಗಿತ್ತು. ಏಕೆಂದರೆ, ಬರೆದುದನ್ನು ಕಾವಲುಗಾರರು ಕಂಡರೆ ಘೋರ ಶಿಕ್ಷೆ;
ದಿನಗಟ್ಟಲೆ ಕೈಗಳಿಗೆ `ಗೋಡೆಯ ಬೇಡಿ’ ಹಾಕಿ ನಿಲ್ಲಿಸುತ್ತಿದ್ದರು. ಕಾಲು
ನಿಲ್ಲಿಸಿದರೂ ಮನಸ್ಸು ನಿಂತೀತೆ? ದೃಢ ನಿರ್ಧಾರದಿಂದ ಅವರು ತಮ್ಮ ಕಾರ್ಯ
ಮುಂದುವರಿಸುತ್ತಿದ್ದರು. ಅವರು ರಚಿಸಿದ ಅzಇμಇಂಔA ಶ್ಲೋಕಗಳು – ದೇಶಕ್ಕಾಗಿ
ಬಲಿಯಾಗುತ್ತಿದ್ದ ಕ್ರಾಂತಿವೀರರAತೆ – ಕಾವಲುಗಾರರ ಕ್ರೌರ್ಯಕ್ಕೆ ಆಹುತಿಯಾಗ
ಬೇಕಾಗಿ ಬಂತು. ಬಿಚಿಟಿμi ಸತ್ತೆಗೆ ಬಾರಿಬಾರಿಗೂ ಸವಾಲೊಡ್ಡಿ ನಿಲ್ಲುತ್ತಿದ್ದ ನವ
ಯುವಕರಂತೆ – ಅವರ ಶ್ಲೋಕರೂಪದ ಮಾನಸಪುತ್ರರು ಮೂಡಿಬರುತ್ತಿದ್ದರು!
ಹೀಗೆ ಸುಮಾರು ನಾಲ್ಕೆöÊದು ಸಾವಿರ ಸಾಲುಗಳನ್ನು ಅವರು ಮನನ
ಮಾಡಿದರು. `ಗೋಮಾಂತಕ’ದ ಉತ್ತರಾರ್ಧವಂತೂ ಅವರದೇ ಆದ ವಿಶಿμಂಔ
ಶೈಲಿಯಲ್ಲಿದೆ; `ವೈನಾಯಕ ವೃತ್ತ’ ಎಂದೇ ಹೆಸರುಗೊಂಡಿದೆ.