samrudhasahitya

Book Details

ಸಂಘಶಕ್ತಿ

Pages: 156
Price: 150

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್‌ ಕುರಿತು ನಡೆದಷ್ಟು ಪರ ಅಥವಾ ವಿರೋಧದ ಚರ್ಚೆಗಳು ಇನ್ನಾವ ಸಂಘಟನೆಯ ಬಗ್ಗೆಯೂ ಆಗಿರಲಿಕ್ಕಿಲ್ಲ. ಸಂಘ ಪ್ರಾರಂಭವಾಗಿ ಈಗ್ಗೆ 100 ವರ್ಷಗಳ ಬಳಿಕವೂ ಅಂತಹುದೇ ಪರ ಅಥವಾ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನು.

ಆರೆಸ್ಸೆಸ್‌ ಅನೇಕರಿಗೆ ಈಗಲೂ ಒಂದು ವಿಸ್ಮಯ. ಕೆಲವರಿಗೆ ಈಗಲೂ
ಅರ್ಥವಾಗದ ಸಂಘಟನೆ. ದೂರದಿಂದ ಆರೆಸ್ಸೆಸ್ಸನ್ನು ಕಂಡವರಿಗೆ ಸಂಶಯ,
ವಿಸ್ಮಯ, ಅನುಮಾನ ಕಾಡುವುದು ಸಹಜ. ಆದರೆ ಹತ್ತಿರ ಬ೦ದು ಅದರೊಳಗೆ ಇಳಿದವರಿಗೆ ಅಂತಹ ಭಾವನೆಗಳು ಕಾಡಲಾರವು. ಹಿ೦ದು ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಸಂಘದ ಮೌನಕಾರ್ಯ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತಾದೀತು. ಹಿಂದು ಸಮಾಜದ ಸಂಘಟನೆಗಾಗಿ ಸಾವಿರಾರು ಅನಾಮಿಕ ಪ್ರಾತಃಸ್ಮರಣೀಯ ಕಾರ್ಯಕರ್ತರು ಅಹರ್ನಿಶಿ ತಮ್ಮ ಬೆವರು-ಕಣ್ಣೀರು-ನೆತ್ತರು ಹರಿಸಿದ್ದು, ಈಗಲೂ ಹರಿಸುತ್ತಿರುವುದು ದಾಖಲೆಯಾಗದ ಮಹತ್ತರ ದಾಖಲೆ.