ಹಿಂದುಗಳಿಗೆ ಹಿಂದುಸ್ತಾನ ಮುಸಲ್ಮಾನರಿಗೆ ಪಾಕಿಸ್ತಾನ ಎಂದಿದ್ದು ಏಕೆ?
Pages: 160
Price: 160

ಸಮಸ್ಯೆಯ ಸ್ವರೂಪವನ್ನು ಸರಿಯಾಗಿ ಗ್ರಹಿಸಲು ಮತ್ತು ಪರಿಹಾರ ಸೂಚಿಸಲು ಅತ್ಯಂತ ಸ್ಪಷ್ಟವಾದ ಚಿಂತನೆ ಇರಬೇಕು. ಅದನ್ನು ತಿಳಿಹೇಳಲು, ಪಾಂಡಿತ್ಯ, ಪರಿಶ್ರಮಗಳಿರಬೇಕು. ರಾಜಕೀಯ ಚುಕ್ಕಾಣಿ ಹಿಡಿದಿದ್ದ ದೊಡ್ಡವರನ್ನು ಎದುರಿಸುವ ಎಂಟೆದೆ ಇರಬೇಕು. ಈ ಎಲ್ಲ ಗುಣಗಳು ಬಾಬಾ ಸಾಹೇಬರಲ್ಲಿ ಮುಪ್ಪುರಿಗೊಂಡಿದ್ದುವು. ಈ ಗ್ರಂಥದಲ್ಲಿಯೆ ಎಲ್ಲದಕ್ಕಿಂತ ದೊಡ್ಡ ಭಾಗ ನಾಲ್ಕನೆಯದು. ಇದರಲ್ಲಿ ಮುಸಲ್ಮಾನ ಸಮಾಜದಲ್ಲಿ ಬೇರು ಬಿಟ್ಟಿರುವ ಅತ್ಯಂತ ಜುಗುಪ್ಸಾವಹವಾದ ದೋಷಗಳನ್ನು ಬಿಡಿಸಿ ಬಿಡಿಸಿ ಬರೆಯಲಾಗಿದೆ.
ಬದುಕಿನ ತರ್ಕಗಳು
Pages: 120
Price: 120

ಜೀವನವೆಂದರೆ ಪ್ರತಿದಿನವೂ ನಿರ್ಧಾರಗಳ ಪಯಣ.ಪ್ರತಿ ಕ್ಷಣದಲ್ಲೂ ನಾವು ಸಣ್ಣದರಿಂದ ದೊಡ್ಡದರವರೆಗೆ ಅನೇಕ ಆಯ್ಕೆಗಳನ್ನು ಮಾಡುತ್ತೇವೆ. ಆ ನಿರ್ಧಾರಗಳು ಆ ಕ್ಷಣದಲ್ಲಿ ನಮಗೆ ಸರಿಯಾಗಿಯೇ ಕಾಣಿಸುತ್ತವೆ. ಆದರೆ ಬದುಕಿನ ವಾಸ್ತವಿಕತೆ, ಸಮಾಜದ ಚಲನೆ ಮತ್ತು ಪ್ರಪಂಚದ ನಿಯಮಗಳೊಂದಿಗೆ ಅವು ಹೊಂದಿಕೊಂಡಾಗ ಮಾತ್ರ ಅವುಗಳ ಫಲಿತಾಂಶಗಳು ನಮ್ಮನ್ನು ಮುಂದೆ ಕೊಂಡೊಯ್ಯುತ್ತವೆ. ಈ ಕೃತಿಯಲ್ಲಿ ಜೀವನದ ವಿವಿಧ ಆಯಾಮಗಳನ್ನು ತರ್ಕ, ಅನುಭವ ಮತ್ತು ತಾತ್ವಿಕ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಓದುಗರಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟಿಸಿ, ಆಲೋಚನೆಗೆ ಪ್ರೇರೇಪಿಸುವ ಉದ್ದೇಶದಿಂದ ಕೆಲವು […]
ಬೆಳಕಿನ ಹೊಳೆ
Pages: 118
Price: 118

ನಾಡಿನ ಹೆಸರಾಂತ ಸಾಹಿತಿ, ತತ್ತ್ವದರ್ಶನಗಳ ಅಪೂರ್ವ ವ್ಯಾಖ್ಯಾನಕಾರರಾದ ಜಿ. ಬಿ. ಹರೀಶ ಅವರು ರಚಿಸಿರುವ ಸಾ. ಕೃ. ರಾಮಚಂದ್ರ ರಾಯರ ಜೀವನಚರಿತ್ರೆಯನ್ನು ಓದುವಾಗ ಮನಸ್ಸು ಒಂದೇ ವೇಳೆ ರೋಮಾಂಚನಗೊಳ್ಳುತ್ತದೆ; ಜೊತೆಗೆ ಒಂದು ರೀತಿಯ ವಿಷಾದವೂ ಆವರಿಸುತ್ತದೆ. ಅಸಾಮಾನ್ಯ ಪ್ರತಿಭೆ, ಅಪಾರ ಅಧ್ಯಯನಶೀಲತೆ ಮತ್ತು ಜ್ಞಾನಸಂಪತ್ತಿನ ಧನಿಯಾಗಿದ್ದ ರಾಯರು, ಬಹುಶಃ ಅಮೆರಿಕ ಅಥವಾ ಜರ್ಮನಿಯಂತಹ ದೇಶಗಳಲ್ಲಿ ಜನಿಸಿದ್ದರೆ ವಿಶ್ವವಿದ್ಯಾಲಯಗಳ ಇಂಡಾಲಜಿ ಹಾಗೂ ಪ್ರಾಚ್ಯ ಅಧ್ಯಯನ ವಿಭಾಗಗಳಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿ, ಇನ್ನಷ್ಟು ಜಾಗತಿಕ ಖ್ಯಾತಿ ಮತ್ತು ಗೌರವವನ್ನು ಗಳಿಸಬಹುದಿತ್ತು ಎಂಬ ಭಾವನೆ ಸಹಜವಾಗಿ ಮೂಡುತ್ತದೆ. […]
1948 ಬ್ರಾಹ್ಮಣರ ನರಮೇಧ
Pages: 280
Price: 280

೧೯೪೮ರ ಚಿತ್ಪಾವನ ಬ್ರಾಹ್ಮಣ ಸಮುದಾಯದ ಹಾಗೂ ಇತರ ಬ್ರಾಹ್ಮಣರ ನರಮೇಧ ಯಾರ ಕಿವಿಗೂ ಬೀಳಲಿಲ್ಲ, ಕಣ್ಣಿಗೂ ಕಾಣಿಲಿಲ್ಲ. ಸಾವಿರಾರು ಜನರು ಮಾತ್ರ ವಿನಾಕಾರಣ ಅಮಾನುಷವಾದ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಕ್ಕೀಡಾದರು. ಅವರು ಮಾಡಿದ್ದ ಒಂದೇ ಅಪರಾದ ! ಬ್ರಾಹ್ಮಣರಾಗಿ ಹುಟ್ಟಿದ್ದು !! ಅಂದಿನ ಭಾರತೀಯ ಮಾಧ್ಯಮಗಳು ಇದರ ಬಗ್ಗೆ ಚಕಾರ ಎತ್ತಲಿಲ್ಲ. ಈ ನರಮೇಧಗಳಲ್ಲಿ ಕೆಲವಕ್ಕೆ ಮಾತ್ರ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಭಾಗ್ಯ ! ಉಳಿದವು ಎಲ್ಲೋ ಮರೆಯಾಗಿ, ಏನೂ ಆಗಿಯೇ ಇಲ್ಲವೇನೋ ಎಂಬAತೆ ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟಿವೆ. […]
ಬ್ಲಾಕ್ ಅಂಡ್ ವೈಟ್ ಗಾಂಧಿ
Pages: 120
Price: 120

ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರೇ? ಸಾಕ್ಷಿಗಳು ಏನು ಹೇಳುತ್ತವೆ? ಗಾಂಧಿಗೆ ನಾಥೂರಾಂ ಗೋಡ್ಸೆ ಗುಂಡು ಹಾರಿಸಿದ. ಅವರು ಕೆಳಕ್ಕೆ ಬಿದ್ದು ಅಂತಿಮ ಉಸಿರು ಎಳೆದು ಸತ್ತರು. ಇಷ್ಟೇ ನಡೆದಿದ್ದು, ಅವರು ಹೇ ರಾಂ ಎಂದು ಹೇಳಲಿಲ್ಲ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರು ಎನ್ನುವವರೂ ಇದ್ದಾರೆ. ಸಮಕಾಲೀನ ಪತ್ರಿಕೆಗಳು, ಇತಿಹಾಸಕಾರರು ಏನು ಹೇಳುತ್ತಾರೆ ನೋಡೋಣ. ಮರುದಿವಸದ ದಿ ಹಿಂದೂ ಪತ್ರಿಕೆಯ ವರದಿ ಹೀಗಿದೆ, ಅದರಲ್ಲಿ ಗಾಂಧಿ […]
ಹಿಂದೂ ಮಸೀದಿಗಳು
Pages: 152
Price: 160

ಈ ಪುಸ್ತಕದಲ್ಲಿರಿ ಇರುವ ವಿಶೇಷ ಔರಂಗಜೇಬ್ ನಡೆಸಿದ ಆಕ್ರಮಣಗಳ ಫಲವಾಗಿ ಯಾವ ಯಾವ ದೇವಸ್ಥಾನಗಳು ನಶಿಸಿಹೋಯಿತು ಎಂಬುದರ ಪರಿಚಯ ಮತ್ತು ಕೇವಲ 60 ಗಂಟೆಗಳಲ್ಲಿ ಹೇಗೆ ಅಜ್ಮೀರ್ ನಲ್ಲಿರುವ ನಮ್ಮ ದೇವಾಲಯಗಳು ಮಸೀದಿಗಳಾಯಿತು ಎಂಬ ವಿಷಯವನ್ನು ತಿಳಿಸುವ ರಣರೋಚಕ ಕಥೆ.. ಒಂದೇ ಕಟ್ಟಡದಲ್ಲಿ ಮಂದಿರ ಮತ್ತು ದರ್ಗಾದ ವಿಷಯ ಬೋಜರಾಜನ ಭೋಜ ಶಾಲಾ ದೇವಸ್ಥಾನ ಮಸೀದಿಯಾದ ಪರಿಸ್ಥಿತಿ ಈ ಎಲ್ಲಾ ವಿಷಯಗಳ ಜೊತೆಗೆ ಅಪರೂಪದ ಛಾಯಾಚಿತ್ರಗಳು ಒಳಗೊಂಡಂತ ಪುಸ್ತಕವೇ ಹಿಂದೂ ಮಸೀದಿಗಳು
ಉಳಿವುದೊಂದೆ ಹಿಂದೂ ಧರ್ಮ
Pages: 320
Price: 320

ಫ್ರೆಂಚ್ ಕಾಲಜ್ಞಾನಿ ನೋಸ್ತ್ರಾದಾಮಸ ಭವಿಷ್ಯವಾಣಿಯಲ್ಲಿ ಭಾರತದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ ಅದರಲ್ಲಿ ಕೆಲವು ಕೌತುಕ ವಿಚಾರವೇನೆಂದರೆ ಇಡೀ ವಿಶ್ವವೆಲ್ಲ ಮೂರನೇ ಮಹಾಯುದ್ಧವಾಗಿ ಸರ್ವನಾಶವಾಗುತ್ತದೆ ಕೇವಲ ಹಿಂದೂ ಧರ್ಮ ಮಾತ್ರ ಉಳಿಯುತ್ತದೆ. ಮಿಕ್ಕ ಧರ್ಮಗಳು ಹೇಗೆ ನಶಿಸಿ ಹೋಗುತ್ತದೆ ಎಂಬುದರ ಕುರಿತಾದ ವಿಚಾರಗಳನ್ನು ಹಿರಣ್ಯಪ ಅವರು ಕಳೆದ ಕೆಲವು ದಶಕಗಳ ಹಿಂದೆ ಈ ಕೃತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ವ್ಯಾಖ್ಯಾನಿಸಿ ಪ್ರಕಟಿಸಿದರು. ಇದು ಅಂದಿನ ಕಾಲಕ್ಕೆ ಬಹು ಚರ್ಚಿತವಾಗಿ ಈ ಪುಸ್ತಕಕ್ಕೆ ಸರ್ಕಾರ ನಿರ್ಬಂಧ ಹೇರಲಾಗಿತ್ತು ತದನಂತರ ಹಿರಣ್ಯ […]