ಗಾಂಧಿ ಮತ್ತು ಅರಾಜಕತೆ
ಮೂಲ : ಸರ್. ಸಿ. ಶಂಕರನ್ ನಾಯರ್
ಕನ್ನಡಕ್ಕೆ : ಡಾ. ಟಿ.ಎನ್. ವಾಸುದೇವಮರ್ತಿ
“ಗಾಂಧಿ ಮತ್ತು ಅರಾಜಕತೆ” ನಮ್ಮ ದೇಶದ ಬಹಳ ಮುಖ್ಯ ನಾಯಕರಾದ ಗಾಂಧಿಯವರ ರಾಜಕೀಯ, ಸಾಮಾಜಿಕ ನಿಲುವುಗಳನ್ನು ವಿರ್ಶಿಸುವ ಕೃತಿ. ಗಾಂಧಿಯವರ ಚಿಂತನೆ ಮತ್ತು ಕ್ರಿಯೆಯ ನಡುವಿನ ಬಿರುಕು ಕೇವಲ ಒಬ್ಬ ನಾಯಕನ ವೈಯಕ್ತಿಕ ಜೀವನದ ಇಷ್ಟಾನಿಷ್ಟಗಳ ವಿಷಯವಾಗಿರದೆ ಅದು ಸಮಾಜ, ಇತಿಹಾಸದ ಮೇಲೆ ದರ್ಘ ಹಾಗೂ ಆಳವಾದ ಪರಿಣಾಮಗಳನ್ನು ಬೀರಬಲ್ಲದು ಎಂಬುದು ಮೂಲ ಲೇಖಕರ ಕಾಳಜಿ. ಭಾರತದ ಸಮಕಾಲೀನ ಇತಿಹಾಸದ ಓದಿಗೆ ಇದೊಂದು ಮುಖ್ಯವಾದ ಸರ್ಪಡೆ. ಈ ಪುಸ್ತಕವನ್ನು ಡಾ. ಅಂಬೇಡ್ಕರ್ ತಮ್ಮ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಗ್ರಂಥದಲ್ಲಿ ಉಲ್ಲೇಖಿಸಿ, ಅನುಮೋದಿಸಿದ್ದರು ಎಂಬುದು ಗಮನರ್ಹ. ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಹೇಗೆ ಮುಸ್ಲಿಂ ಓಲೈಕೆಯ ನೀತಿಯನ್ನು ಅಳವಡಿಸಿಕೊಂಡಿತು, ಅದು ಖಿಲಾಫತ್ ಆಂದೋಲನ ಮತ್ತು ಅದರ ಸಂತಾನವಾದ ಕೇರಳದ ಮೋಪ್ಲಾ ಹಿಂಸಾಚಾರಕ್ಕೆ ಹೇಗೆ ಪ್ರೇರಣೆ ನೀಡಿತು ಎಂಬ ವಿವರಗಳು ಇದರಲ್ಲಿವೆ. ಗಾಂಧಿ ಮತ್ತು ಕಾಂಗ್ರೆಸ್ ಅನ್ನು ವಿರ್ಶಿಸಿದ ಕಾರಣಕ್ಕೆ ಈ ಪುಸ್ತಕ ಮುಖ್ಯವಾಹಿನಿಯ ರ್ಚೆಯಿಂದ ಇದುವರೆಗೂ ದೂರ ಉಳಿದಿತ್ತು. ಆದರೆ ದೇಶದೊಳಗೆ ಸಣ್ಣ ಸಣ್ಣ ಪಾಕಿಸ್ತಾನಗಳು ನರ್ಮಾಣವಾಗುತ್ತಿರುವ ಈ ಕಾಲದಲ್ಲಿ ಇತಿಹಾಸದ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ದೃಷ್ಟಿಯಿಂದ ದೇಶದ ಬಗ್ಗೆ ಕಾಳಜಿಯಿರುವವರು ಅನಿವರ್ಯವಾಗಿ ಓದಲೇಬೇಕಾದ ಮಹತ್ವದ ಪುಸ್ತಕ.