samrudhasahitya

Book Details

ಪವಿತ್ರ ಗಿಡಮರಗಳು br>
Pages: 90
Price: 75

ಪ್ರಪಂಚದ ಬೇರೆ ಯಾವುದೇ ರಾಷ್ಟçದಲ್ಲಿ ಗಿಡಗಳಿಗೆ ಮರಗಳಿಗೆ ಪ್ರಕೃತಿಗೆ ಭಾರತ ಕೊಟ್ಟಿರುವಷ್ಟು ಪ್ರಾಮುಖ್ಯತೆ ಇಲ್ಲ. ಪ್ರಕೃತಿಯನ್ನು ದೈವವಾಗಿ ಪರಿಗಣಿಸಿರುವ ನಮ್ಮ ಪೂರ್ವಜರು `ವನದೇವತೆ’ ಎಂದು ನಿಸರ್ಗವನ್ನು ಆರಾಧಿಸುತ್ತಾರೆ. ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಗಿಡಮರ ಗಳಿಗೆ ದೈವತ್ವವನ್ನು ನೀಡಲಾಗಿದೆ. ಇದಕ್ಕೆ ಬಹಳ ಕಾರಣಗಳಿವೆ. ಬಹೂಪಯೋಗಿಯಾದ ಯಾವುದೇ ವಸ್ತುವಿಗೆ ದೈವತ್ವ ನೀಡುವುದು ಭಾರತೀಯರ ಸಹಜ ಗುಣ. ವೇದ, ಉಪನಿಷತ್ತು ಮುಂತಾದ ಸದ್ಗçಂಥಗಳು, ರೂಪುಗೊಂಡಿದ್ದು ಅರಣ್ಯಗಳಲ್ಲಿ. ನಮ್ಮ ಪೂಜ್ಯ ಋಷಿವರ್ಯರು (ಅವರು ವಿಜ್ಞಾನಿಗಳು ಕೂಡ ಆಗಿದ್ದರು) ನೆಲೆಸಿದ್ದು ಕಾಡುಗಳಲ್ಲಿ, ಪ್ರಪಂಚದಲ್ಲಿ ಅತ್ಯಂತ ಪ್ರಾಚೀನವಾದ ಔಷಧ ವಿಜ್ಞಾನ (ಆಯುರ್ವೇದ) ರೂಪುಗೊಂಡಿದ್ದು ಭಾರತ ದಲ್ಲಿ. ಇಷ್ಟೆಲ್ಲಾ ದೀರ್ಘ ಇತಿಹಾಸವಿರುವ ಭಾರತೀಯ ಸಸ್ಯಗಳ ಪರಿಚಯ (ಪೂಜೆ ಪುನಸ್ಕಾರಗಳಲ್ಲಿ, ಔಷಧಿಯಲ್ಲಿ)