samrudhasahitya

Book Details

ಅದ್ವಿತೀಯ br>
Pages: 140
Price: 120

ಜೊತೆಗಿದ್ಧ ಸಾವಿರಾರು ಜನರಿಗೆ ‘ಮೋಹನಜೀ’ ಎಂದೇ ಪರಿಚಿತ. ರಾಮಜನ್ಮಭೂಮಿ ಹೋರಾಟದಿಂದ ಮೊದಲ್ಗೊಂಡು ಬೆನ್ನಿಹಿನ್ ಪ್ರಕರಣದವರೆಗೆ ಸುಮಾರು 15 ವರ್ಷಗಳ ಕಾಲ ಬೆಂಗಳೂರಿನಲ್ಲಿ ಹಲವು ಹಿಂದೂಪರ ಹೋರಾಟಗಳ ಸಂಘಟಕರಾಗಿದ್ದವರು ಮೋಹನಜೀ.

ಬೆಂಗಳೂರಿನ ಎನ್.ಆರ್. ಕಾಲೋನಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ತಮ್ಮ ವಿದ್ಯಾರ್ಥಿ ದಿಸೆಯುದ್ದಕ್ಕೂ ಪ್ರತಿಭಾವಂತರನಿಸಿ, ಇಂಜಿನಿಯರಿAಗ್ ಪದವಿ ಪಡೆದು ‘ಮೈಕೋ’ ದಂತಹ ಪ್ರತಿಷ್ಠಿತ ಕಂಪನಿಯ ಉನ್ನತ ಹುದ್ದೆಯಲ್ಲಿದ್ದೂ, ಬೆಂಗಳೂರಿನ ಟ್ಯಾನರಿ ರಸ್ತೆಯ ಹಿಂದು ಹುಡುಗರಿಗೆ ಹೋರಾಟದ ಸ್ಪೂರ್ತಿ ಕೇಂದ್ರವಾದವರು ಶ್ರೀ ಮೋಹನ್‌ಜೀ. ಬೆಂಗಳೂರಿನ ನೂರಾರು ಸ್ಲಂಗಳಲ್ಲಿನ ಜನಜೀವನ, ಅಲ್ಲಿ ನಡೆಯುತ್ತಿದ್ದ ಮತಾಂತರ ಇತ್ಯಾದಿ ಚಟುವಟಿಕೆಗಳ ಬಗ್ಗೆ ವಿಸ್ತೃತ ಅಧ್ಯಯನ, ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿ ಸಮಾಜವನ್ನೂ ಸಂಘಟಿಸಬಲ್ಲ ಹಿಂದೂ ಯುವಕರ ಪಡೆಯನ್ನು ಕಟ್ಟುವ ಕೂಶಲತೆ ಮೋಹನ್‌ಜೀ ಅವರಲ್ಲಿದ ಅಪರೂಪದ ಗುಣ.

ಅಯೋಧ್ಯ ಹೋರಾಟ, ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ಹೋರಾಟ, ತಿರುಪತಿ ಮತಾಂತರದ ವಿರುದ್ಧ ಹೋರಾಟ, ಬೆನ್ನಿಹಿನ ಪ್ರಕರಣದ ಬಗ್ಗೆ ಅಂದೋಲನ. ಹೀಗೆ 2000ನೇ ಇಸವಿಯ ಹಿಂದೆ ಮುಂದೆ ಬೆಂಗಳೂರು ಕೇಂದ್ರವಾಗಿ ನಡೆದ ಅನೇಕ ಹೋರಾಟಗಳ ಚಾಲಕ ಶಕ್ತಿಯಾಗಿದ್ಧವರು ಮೋಹನಜೀ, ಬೆಂಗಳೂರಿನಲ್ಲಿ ಬೃಹತ ಹಿಂದು ಸಮಾವೇಶಗಳನ್ನು ಸಂಘಟಿಸುವದರಲ್ಲಿ ಅವರದೂ ಪ್ರಮುಖ ಪಾತ್ರ..

ನೂರಾರು ಸಾಮಾಜಿಕ ಗಣ್ಯರು, ಮಠಾಧೀಶರ ನಡುವೆ ಅವರಿಗೆ ನೇರ, ನಿಕಟ ಸಂಬಂಧ ಅವರ ಕಾರ್ಯಮಗ್ನತೆಯ ತೀವ್ರತೆ ಎಷ್ಟಿತ್ತೆಂದರೆ ‘ಮೈಕೊ’ದಲ್ಲಿದ್ದ ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು ಸಂಘಟನೆಯಲ್ಲಿ ಮುಳುಗಿದವರು ಮೋಹನ್‌ಜೀ. ತಮ್ಮ 44ರ ಚಿಕ್ಕವಯಸ್ಸಿನಲ್ಲಿ ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಎದೆನೋವಿಗೆ ಒಳಗಾಗಿ ಆಸ್ಪತ್ರೇ ತೆರಳುವ ದಾರಿಯಲ್ಲೇ ಶಿವರಾತ್ರಿ ದಿನದಂದು ಕೊನೆಯುಸಿರೆಳದು ‘ಈಗಿದ್ಧವರು ಈಗಿಲ್ಲ’ ಎಂಬ ನಂಬಲಾರದ ಸಿತ್ಥಿಯಲ್ಲಿ ಎಲ್ಲರನ್ನೂ ಬಿಟ್ಟು ಹೋದವರು ಮೋಹನಜೀ.