samrudhasahitya

Book Details

ಹಿಂದುಪದ-ಪಾದಶಾಹಿ

Pages: 310
Price: 300

ಮರಾಠರ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಗುಣಗ್ರಹಣೆ ಮಾಡಲು ಇದು ಅತ್ಯಂತ ವಿನೂತನವಾದ, ಅನನ್ಯವಾದ ಆಧಾರ. ಅನೇಕ ವಿದ್ವಾಂಸರು, ಇತಿಹಾಸ ಬಲ್ಲ ಮಹನೀಯರು ಈಗಾಗಲೆ ಮರಾಠಚರಿತ್ರೆಯ ಬಗ್ಗೆ ಸಾಕಷ್ಟು ಬರೆದಿದ್ದಾರಾದರೂ, ಅವುಗಳಲ್ಲಿ ಯಾವೊಂದೂ ವಿವರಗಳ ಮೇಲೇರಿ ಸಮಗ್ರವಾದ ದೃಷ್ಟಿಕೋನದಿಂದ ರಚಿತವಾಗಿಲ್ಲ. ಆಂದೋಲನದ ಪದರಗಳ ಒಳಹೊಕ್ಕು ನೋಡಿಲ್ಲ; ಅಸಲಿಗೆ ಎರಡು ಶತಮಾನಗಳ ಕಾಲ ನಿರಂತರವಾಗಿ ನಡೆದ ಮರಾಠಾಯುದ್ಧಗಳಿಗೆ ಮೂಲ ಕಾರಣ ಏನು, ಅವುಗಳನ್ನು ಪ್ರೇರಿಸಿದ ಸ್ಫೂರ್ತಿತತ್ತ÷್ವ ಯಾವುದು ಎಂಬುದನ್ನು ಈ ಗ್ರಂಥ, ಹಿಂದು ಪದ- ಪಾದಶಾಹಿ ನಿರೂಪಿಸುವಂತೆ ಮತ್ತಾವುದೂ ಹೇಳಿಲ್ಲ ಎಂಬುದೆ ಇದರ ಹೆಗ್ಗಳಿಕೆ. ಆಧಾರಸಹಿತವಾಗಿ, ಚರಿತ್ರೆಯ ಪುಟ ಪುಟಗಳಲ್ಲೂ ಅಡಗಿರುವ ಭಾವದೀಪ್ತಿಯನ್ನು ಗ್ರಹಿಸಿ, ಮರಾಠ ಆಂದೋಲನದ ಅಂತಸ್ಸತ್ವವನ್ನು ಮನೋಜ್ಞವಾಗಿ ನಿರೂಪಿಸಿರುವ ಅದ್ಭುತಕೃತಿ. ಈ ಗ್ರಂಥದ ಶೀರ್ಷಿಕೆಯೇ ಅದರ ಸಾರದ ಆತ್ಮದರ್ಶನ ಮಾಡಿಸುವ, ಮೋಡಿಗೊಳಿಸುವ ಪದಪುಂಜವಾಗಿದೆ.
ಹಿಂದುಪದ-ಪಾದಶಾಹಿ ಎಂಬ ಆದರ್ಶವನ್ನು, ಧ್ಯೇಯವನ್ನು, ಹೆಗ್ಗಳಿಕೆಯನ್ನು ಸಾಕಾರಗೊಳಿಸಲು, ಹಿಂದುಜನತೆಯನ್ನು ಕರಾಳ ಮುಸಲ್ಮಾನ ಆಳ್ವಿಕೆಯಿಂದ ಮುಕ್ತಗೊಳಿಸಲು ಮರಾಠರು ಸುಮಾರು ೧೬೦೦ ರಿಂದ ೧೮೦೦ರ ವರೆಗೆ ಮುಸಲ್ಮಾನರೊಂದಿಗೆ ಸತತ ಹೋರಾಟ ನಡೆಸಿದರು. ಎಲ್ಲಿಯವರೆಗೆ? ಕೊನೆಗೊಂಡದ್ದು ಎಂದು? ಹಿಂದುಶಕ್ತಿಗೆ ಸಾಮ್ರಾಟ ಕಿರೀಟ ದೊರೆಯುವವರೆಗೆ, ಶತ್ರುಗಳನ್ನೆಲ್ಲ ಮಕಾಡೆ ಮಲಗಿಸುವವರೆಗೆ, ಪಂಜಾಬದಿAದ ತಂಜಾವೂರಿನ ವರೆಗೆ, ಮುಸಲ್ಮಾನರನ್ನು ಪೂರ್ಣಮಟ್ಟಹಾಕಿ, ಅವರ ತಲೆಯ ಮೇಲೆ ಮೆಟ್ಟಿನಿಲ್ಲುವವರೆಗೆ! ಇಡಿ ಹಿಂದುಸ್ತಾನ ನಿಜವಾಗಲೂ ಹಿಂದುಗಳ ಕೈವಶವಾಗುವವರೆಗೆ.