samrudhasahitya

Book Details

ಗಾಂಧಿ ನಿಜಕ್ಕೂ ಮಹಾತ್ಮರೇ?

Pages: 380
Price: 380

ಗಾಂಧಿಯವರ ಜೀವನದ ಕೊನೆಯ ದಿನಗಳಿಂದಲೂ ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಯೇನೆಂದರೆ, “ಗಾಂಧಿಯವರ ವಿಷಯದಲ್ಲಿ ಎಲ್ಲಿ ತಪ್ಪು ಸಂಭವಿಸಿತು? ಎಲ್ಲ ವಿಧದಲ್ಲಿಯೂ ಅವರು ವಿಫಲರಾಗಿದ್ದು ಹೇಗೆ?” ೧೯೧೮ರ ಸಮಯದಲ್ಲಿಯೂ ಕೂಡ ಅವರು ತಮ್ಮ ಹಲವು ವಿಚಾರಗಳು ಹಾಗೂ ನಿರ್ಧಾರಗಳಲ್ಲಿ ಹಿನ್ನಡೆಯನ್ನು ಕಂಡಿದ್ದಾರೆ. ಅದಾದ ನಂತರದ ಅವರ ಪ್ರತಿಯೊಂದು ಸೋಲು ಕೂಡ ಇದೇ ಪ್ರಶ್ನೆಯನ್ನು ಪರಾಮರ್ಶಿಸಿದೆ. ಭಾರತದ ವಿಭಜನೆಯ ನಂತರವAತೂ ಅವರು ತಮ್ಮ ವೈಫಲ್ಯವನ್ನು ಕುರಿತಾಗಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಅನೇಕ ಬಾರಿ ವಿಚಾರ ವಿಮರ್ಶೆಯನ್ನು ನಡೆಸಿದ್ದಾರೆ. ಆದರೆ ಗಾಂಧಿಯವರಾಗಲಿ ಅಥವಾ ಅವರ ಅನುಯಾಯಿಗಳಾಗಲಿ ಈ ವೈಫಲ್ಯವನ್ನು ಕುರಿತಾಗಿ ವಿವರಣೆ ನೀಡುವಷ್ಟು ಆಳವಾಗಿ ಚಿಂತನೆಯನ್ನು ನಡೆಸಲಿಲ್ಲ. ಆದರೆ ಹಲವರು ಗಾಂಧಿಯವರನ್ನು ನಿರಪರಾಧಿಯಾಗಿಸಿದರು ಮತ್ತು ಅವರನ್ನು `ಜೀವಂತ ಸಮಾಧಿ’ಯಾಗಿಸಿದ ಆರೋಪವನ್ನು ಅವರ ಅನುಯಾಯಿಗಳ ಮೇಲೆ ಹೊರಿಸಿದರು. ಆದರೆ ನಾನು ಗಾಂಧಿಯವರ ಅನುಯಾಯಿಗಳನ್ನು ದೂಷಿಸುವುದಿಲ್ಲ. ಅವರು ತಮ್ಮ ಗುರುವಿನ ಭ್ರಮೆಗಳನ್ನು, ತಪ್ಪು ಕಲ್ಪನೆಗಳನ್ನು ಅನುಸರಿಸಿದರು ಅಷ್ಟೇ! ಒಂದು ವೇಳೆ ಯಾರಾದರೂ ಅವರನ್ನು `ಜೀವಂತ ಸಮಾಧಿ’ ಮಾಡಿದ್ದರೆ, ಅದು ಬೇರೆ ಯಾರೂ ಅಲ್ಲ; ಸ್ವತಃ ಅವರೇ! ಹೇಗೆ? ಈ ಪುಸ್ತಕವು ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತದೆ.