ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರೇ? ಸಾಕ್ಷಿಗಳು ಏನು ಹೇಳುತ್ತವೆ?
ಗಾಂಧಿಗೆ ನಾಥೂರಾಂ ಗೋಡ್ಸೆ ಗುಂಡು ಹಾರಿಸಿದ. ಅವರು ಕೆಳಕ್ಕೆ ಬಿದ್ದು ಅಂತಿಮ ಉಸಿರು ಎಳೆದು ಸತ್ತರು. ಇಷ್ಟೇ ನಡೆದಿದ್ದು, ಅವರು ಹೇ ರಾಂ ಎಂದು ಹೇಳಲಿಲ್ಲ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ ಸಾಯುವ ಮೊದಲು ಗಾಂಧಿ ಹೇ ರಾಮ್ ಎಂದರು ಎನ್ನುವವರೂ ಇದ್ದಾರೆ. ಸಮಕಾಲೀನ ಪತ್ರಿಕೆಗಳು, ಇತಿಹಾಸಕಾರರು ಏನು ಹೇಳುತ್ತಾರೆ ನೋಡೋಣ.
ಮರುದಿವಸದ ದಿ ಹಿಂದೂ ಪತ್ರಿಕೆಯ ವರದಿ ಹೀಗಿದೆ, ಅದರಲ್ಲಿ ಗಾಂಧಿ ಹೇ ರಾಮ್ ಎಂದು ಕೂಗಿದರು ಎಂಬ ಉಲ್ಲೇಖವೇ ಇಲ್ಲ.
31 ಜನವರಿ 1948ರ ದಿ ಹಿಂದು ಪತ್ರಿಕೆ ಗಾಂಧೀಜಿ ಶಾರ್ಟ್ ಡೆಡ್ ಎಂಬ ಹೆಸರಿನಲ್ಲಿ ವರದಿಯನ್ನು ಪ್ರಕಟಿಸಿದೆ ಅದರ ಎಂಟನೆಯ ಪ್ಯಾರಾದಲ್ಲಿ 5:00 12 ನಿಮಿಷ ಸಂಜೆ ಏನು ನಡೆಯಿತು ಎಂಬುದನ್ನು ಈ ರೀತಿ ವರದಿ ಮಾಡಲಾಗಿದೆ.
“The last act Gandhiji did was to lift both his hands as a sign of prayer in the direction of the larger gathering which had assembled for the prayer. Thereafter, he was speechless and the loss of blood, at his age and so soon after his fast, made death inevitable. He was beyond medical aid even from the start when shock had its effect.” ಇದನ್ನು ಕನ್ನಡದಲ್ಲಿ ಹೇಳುವುದಾದರೆ ಪ್ರಾರ್ಥನೆಗೆಂದು ಸೇರಿದ್ದ ವಿಶಾಲವಾದ ಜನಸಬಹುದಾಯದ ದಿಕ್ಕಿಗೆ ಗಾಂಧೀಜಿ ಪ್ರಾರ್ಥನೆಯ ಸಂಕೇತ ಎಂಬಂತೆ ತಮ್ಮ ಎರಡೂ ಕೈಗಳನ್ನು ಜೋಡಿಸಿದರು ಜೋಡಿಸಿದ್ದೆ
ಗಾಂಧೀಜಿ ಮಾಡಿದ ಕೊನೆಯ ಚಟುವಟಿಕೆ ಇದಾದ ನಂತರ ಅವರಿಂದ ಮಾತು ಹೊರಡಲಿಲ್ಲ ಅವರ ವಯಸ್ಸಿಗೆ ಮತ್ತು ಈಚಗಷ್ಟೇ ಉಪವಾಸ ಮುಗಿಸಿದ್ದರಿಂದ ಅವರ ಸಾವು ಅನಿವಾರ್ಯವಾಗಿತ್ತು ಯಾವಾಗ ಅವರಿಗೆ ಆಘಾತ ಎರಗಿತು ಆಗಿನಿಂದಲೂ ಅವರು ವೈದ್ಯಕೀಯ ಸೇವೆಯನ್ನು ಪಡೆಯುವ ಸ್ಥಿತಿಯಲ್ಲಿ ಇರಲಿಲ್ಲ.
ಅವನು ತಲೆಗೆ ಕಾಕಿ ವಸ್ತ್ರಧಾರಿಯಾಗಿದ್ದ 36 ವರ್ಷದ ನಾಥರಾಮ ಗೋಡೆ ಗಾಂಧಿಯವರನ್ನು ಗಾಂಧಿಯವರಿಗೆ ಗುಂಡು ಹೊಡೆದ ರಿವಾಲ್ವರ್ ನಿಂದ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಸುಳ್ಳು ಎಂದು ಹಿಂದೂ ಪತ್ರಿಕೆಯ ಅದೇ ದಿನದ ವರದಿಯಲ್ಲಿ ಇದೆ ಜನರು ಅವನನ್ನು ಸ್ವಲ್ಪ ಹೊಡೆದಿದ್ದು ಉಂಟು ಅವನ ಕೈಯಿಂದ ರಿವಾಲ್ವರನ್ನು ಕಿತ್ತುಕೊಳ್ಳಲಾಯಿತು ಮತ್ತು ಜೇಬಿನಲ್ಲಿದ್ದ ಒಂದಷ್ಟು ಹಣವನ್ನು ಹೊರಕ್ಕೆ ತೆಗೆಯಲಾಯಿತು ಬಂಧನಕ್ಕೆ ಒಳಗಾದ ಗೋಡ್ರೆ ಮುಂದೆ ವಿಚಾರಣೆಗೆ ಒಳಗಾದ.
ಇಂದಿಗೂ ಬಹುತೇಕರು ದೇಶದ ಅಧಿಕೃತ ಪತ್ರಿಕೆ ಎಂದು ಒಪ್ಪುವ ದಿ
ಹಿಂದೂ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ಗಾಂಧಿಯವರು ಮರಣಹೊಂದುವ ಮೊದಲು ಹೇ ರಾಮ್ ಎಂದು ಉಚ್ಚರಿಸಲಿಲ್ಲ ನೈನ್ ಅವರ್ಸ್ ಟು ರಾಮ ಸಿನಿಮಾದಲ್ಲೂ ಕೂಡ ಗಾಂಧಿಯವರು ಕೈಮುಗಿದ ಚಿತ್ರಣವಿದೆಗೆ ಹೊರತು ಹೇ ರಾಮ್ ಎಂದು ನುಡಿದದ್ದು ಇಲ್ಲ ಅವನೊಬ್ಬನಿದ್ದ ಗೋಡೆ ಪುಸ್ತಕದಲ್ಲಿ ಹೇ ರಾಮ್ ನುಡಿದರೆ ಎಂಬುದನ್ನು ಮನೋಹರ ಮಳಗಾಂವಕರ್ ವಿಚಾರಣೆಗೆ ಒಳಗು ಮಾಡಿದ್ದಾರೆ. ಅವರು ಬರೆದಿರುವಂತೆ ಕೆಲವು ಪತ್ರಕರ್ತರ ಪ್ರಕಾರ ಗಾಂಧಿಯವರು ಹೇ ರಾಮ್ ಎಂದು ಮೆಲ್ಲಗೆ ನುಡಿದರು ಕೆಲವರು ಪ್ರಕಾರ ನುಡಿಯಲಿಲ್ಲ ನುಡಿದಿದ್ದರೂ ನುಡಿದಿರಬಹುದು ಎಂದು ಎನ್ನುತ್ತಾರೆ ಆದರೆ ಮಳಗಾಂವಕರ್ ಅವರ ಬರವಣಿಗೆಗೂ (ಅಂದರೆ ರವಿ ಬೆಳಗೆರೆ ಅನುವಾದ ಮಾಡಿರುವ ಸಾಲುಗಳಿಗೂ) ‘ದಿ ಹಿಂದೂ’ ಪತ್ರಿಕೆಯ ದಿನಾಂಕ 31.01.1948ರ ಸಮಕಾಲೀನ ವರದಿಗೂ ಮ್ಯಾಚ್ ಆಗುತ್ತಿಲ್ಲ. ಆದ್ದರಿಂದ ಗಾಂಧಿಯವರು ಹೇ ರಾಮ್ ಎಂದು ನುಡಿಯಲಿಲ್ಲ ಎನ್ನುವುದು ಖಚಿತ ಮುಂದೆ ಅವರ ಸಾವಿಗೆ ಒಂದು ಅಲೌಕಿಕ ಪ್ರಭಾವಳಿಯನ್ನು ಉಂಟು ಮಾಡಲು ಕೆಲವು ಲೇಖಕರು ಸಿನಿಮಾ ನಿರ್ದೇಶಕರು ರೀತಿ ಮಾಡಿದ್ದುಂಟು. ಸಮಕಾಲೀನ ನೈಜ ವ್ಯಕ್ತಿಗಳನ್ನು ಹೇಗೆ ಭಕ್ತ ಸಮುದಾಯ ಮಾಧ್ಯಮಗಳು ಅವತಾರ ಪುರುಷನನ್ನಾಗಿ ಮಾರ್ಪಾಟು ಮಾಡುತ್ತವೆ. ಎನ್ನುವುದಕ್ಕೆ ಗಾಂಧಿಯವರು ಹೇಳಿರದ ಹೇ ರಾಮ್ ಎಂಬುದನ್ನು ಅವರ ಬಾಯಿಯಿಂದಲೇ ಹೇಳಿಸಿದ ಮುಂದಿನ ದಿನಗಳ ಪ್ರಕ್ರಿಯೆ ಸಾಕ್ಷಿಯಾಗಿದೆ.
ಆಕರಗಳು:
The Assassination of Mahatma Gandhi Trail & Verdict 1948-49, The Hindu History Series, THG Publishing Private Limited, Anna Salai, 2020. Page 52.
ಅವನೊಬ್ಬನಿದ್ದ ಗೋಡೆ ರವಿ ಬೆಳಗೆರೆ, (ಮೂಲ ಮನೋಹರ ಮಳಗಾಂಕ), ಭಾವನಾ ಪ್ರಕಾಶನ, ಬೆಂಗಳೂರು, ಫೆಬ್ರುವರಿ 2009, ಪುಟ 136,
Mahatma Gandhi Political Saint & Unarmed Prophet, Dhanajay Keer, Popular Prakashan, Mumbai, 2020 (1973), P.778.
The Life And Death of Mahatma Gandhi, Robert Payne, Rupa & Co, Seventh Impression, 2007, (1997), P 633-634
ಬ್ಲಾಕ್ ಅಂಡ್ ವೈಟ್ ಗಾಂಧಿ ಪುಸ್ತಕದಿಂದ
ಲೇಖಕರು ಡಾಕ್ಟರ್ ಜಿ ಬಿ ಹರೀಶ
ಪ್ರಕಟಣೆ ಸಮೃದ್ಧ ಸಾಹಿತ್ಯ