ಫ್ರೆಂಚ್ ಕಾಲಜ್ಞಾನಿ ನೋಸ್ತ್ರಾದಾಮಸ ಭವಿಷ್ಯವಾಣಿಯಲ್ಲಿ ಭಾರತದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ ಅದರಲ್ಲಿ ಕೆಲವು ಕೌತುಕ ವಿಚಾರವೇನೆಂದರೆ ಇಡೀ ವಿಶ್ವವೆಲ್ಲ ಮೂರನೇ ಮಹಾಯುದ್ಧವಾಗಿ ಸರ್ವನಾಶವಾಗುತ್ತದೆ ಕೇವಲ ಹಿಂದೂ ಧರ್ಮ ಮಾತ್ರ ಉಳಿಯುತ್ತದೆ. ಮಿಕ್ಕ ಧರ್ಮಗಳು ಹೇಗೆ ನಶಿಸಿ ಹೋಗುತ್ತದೆ ಎಂಬುದರ ಕುರಿತಾದ ವಿಚಾರಗಳನ್ನು ಹಿರಣ್ಯಪ ಅವರು ಕಳೆದ ಕೆಲವು ದಶಕಗಳ ಹಿಂದೆ ಈ ಕೃತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ವ್ಯಾಖ್ಯಾನಿಸಿ ಪ್ರಕಟಿಸಿದರು. ಇದು ಅಂದಿನ ಕಾಲಕ್ಕೆ ಬಹು ಚರ್ಚಿತವಾಗಿ ಈ ಪುಸ್ತಕಕ್ಕೆ ಸರ್ಕಾರ ನಿರ್ಬಂಧ ಹೇರಲಾಗಿತ್ತು ತದನಂತರ ಹಿರಣ್ಯ ಪ ಅವರು ಕಾನೂನಿನ ಹೋರಾಟ ಮೂಲಕ ಜಯಶೀಲರಾದರು. ಮುಂದೆ 19 92ರ ನಂತರ ಮತ್ತೊಮ್ಮೆ ಈ ಕೃತಿಗೆ ಚರ್ಚೆಗೆ ಬಂದು ಅಷ್ಟೇ ಅಲ್ಲದೆ ಮೂಲ ಲೇಖಕರನ್ನು ಸಹ ಸರ್ಕಾರ ಬಂಧಿಸಿದರು ಹೀಗೆ ಒಟ್ಟು ಎರಡು ಬಾರಿ ಮೂಲ ಲೇಖಕರನ್ನು ಈ ಕೃತಿಯ ವಿಚಾರವಾಗಿ ಬಂಧಿಸಿದ್ದರು. ಆದರೆ ಹಿರಣ್ಯಪ್ಪ ಅವರು ತಮ್ಮ ಹೋರಾಟದ ಮೂಲಕ ಹೊರ ಬಂದರು. ಅಷ್ಟೇ ಅಲ್ಲ ಈ ಪುಸ್ತಕದ ಕುರಿತು ಯಾರ್ಯಾರು ಇದಕ್ಕೆ ನಿರ್ಬಂಧ ಹೇರಿದಾರೋ ಅಂತವರ ಪರಿಸ್ಥಿತಿ ಸರಿಗಿರುವುದಿಲ್ಲ ಎಂದು ಅಂದಿನ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರಿಗೆ ಎಚ್ಚರಿಕೆ ನೀಡಿದ್ದರು.
ವಿಪರ್ಯಾಸ ಏನಂದರೆ ಪೂರ್ಣ ಪ್ರಮಾಣದ ಸಂಖ್ಯೆ ಇದ್ದ ವೀರೇಂದ್ರ ಪಾಟೀಲ್ ಅವರ ಸರ್ಕಾರ ಬಿದ್ದುಹೋಗಿದ್ದು ನಾವು ಇಲ್ಲಿ ಗಮನಿಸಬೇಕು..