ವಿದ್ಯಾರ್ಥೀಗಳು ಮತ್ತು ಜನ ಸಾಮಾನ್ಯರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಅವಶ್ಯವಾದ ಸಂಗತಿಗಳನ್ನು ನೇರವಾಗಿ ಹೇಳಿದರೆ ಅದು ಕಟು ಸತ್ಯವಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.ಸತ್ಯವನ್ನು ನೇರವಾಗಿ ಹೇಳಿದರೆ ಅದನ್ನು ಇಷ್ಟ ಪಟ್ಟು ಸ್ವೀಕರಿಸುವವರೂ ಬಹಳ ಕಡಿಮೆ. ಆದರೆ, ಅದೆ ಸಂಗತಿಯನ್ನು ಒಂದು ಸಣ್ಣ ಕಥೆಯ ಮೂಲಕವೋ ಅಥವಾ ನಿದರ್ಶನದ ಮೂಲಕವೋ ತಿಳಿಸಿದರೆ ಆ ಕಥೆಯನ್ನು ಕೇಳುತ್ತಲೆ ವ್ಯಕ್ತಿಗೆ ಬೇಗ ಕಥೆಯೊಳಗಿನ ತಿರುಳು ಅಥವಾ ವಿಚಾರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲೇ ಹಿಂದೆ ಪಂಚತAತ್ರ ಕಥೆಗಳು, ಮತ್ತು ಈಸೋಪನ ನೀತಿಕಥೆಗಳು ರೂಪುಗೊಂಡಿದ್ದವು.