ಕಲೆಯ ಬಗ್ಗೆ ಅಭಿಯುಚಿ ಬೆಳೆಸಿಕೊಳ್ಳುವುದು ಕಲಾವಿದರ ಬಗ್ಗೆ ತಿಳಿದುಕೊಳ್ಳುವುದು ಮತ್ತು ಕಲಾ ಉಪಾಸಕರನ್ನು ಪ್ರೋತ್ಸಾಹಿಸುವುದು, ಗೌರವಿಸುವುದು ನಮ್ಮೆಲ್ಲರ ಸಾಮಾಜಿಕ ಕರ್ತವ್ಯ. ಹೀಗಾಗಲೇ ಕಲಾಸಂಸ್ಥೆ ಬೆಳೆೆಯುತ್ತದೆ.
33 ಆಯ್ದ ಕಲಾವಿದರನ್ನು ವಿಶೇಷವಾಗಿ ಚಿತ್ರ ಕಲಾವಿದರನ್ನು, ಸಂದರ್ಶಿಸಿ ಕಲಾವಿದರ ಜೀವನ ಚಿತ್ರಣಗಳನ್ನು, ವಿವರಗಳನ್ನು ಸಂಗ್ರಹಿಸಿ, ಕಣ್ಣಿಗೆ ಕಟ್ಟುವಂತೆ ಮತ್ತು ಹೃದಯಕ್ಕೆ ನಾಟುವಂತೆ ನಮ್ಮೆಲ್ಲರಿಗೂ ಒದಗಿಸಿದ್ದಾರೆ.
ಹತ್ತು ಹಲವಾರು ಹಿರಿಯ ಖ್ಯಾತ ವೃತ್ತಿಪರ ಕಲಾವಿದರ ಮತ್ತು ಹವ್ಯಾಸಿ ಕಲಾವಿದರ ಜೊತೆಗೆ ಗಮನಾರ್ಹ ಉದಯೋನ್ಮುಖ ಕಲಾವಿದರನ್ನೂ ಈ ಕೃತಿಗೆ ಸೇರಿಸಿಕೊಂಡು, ಯಾವದೇ ಬೇಧಭಾವವಿಲ್ಲದ ಅವರ ಜೀವನ ಸಾಧನೆಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ಇವರ ಜೊತೆಗೆ ಎಲ್ಲ ಕಲಾವಿದರ ಒಂದೊಂದು ವರ್ಣಚಿತ್ರವನ್ನು ಪರಿಚಯಾತ್ಮಕವಾಗಿ ನೀಡಿದ್ದಾರೆ. ಈ ಕಲಾವಿದರ ಬಗ್ಗೆ ಆಸಕ್ತಿ ಇರುವವರು ಹೆಚ್ಚಿನ ವಿವರಗಳನ್ನು ಪಡೆಯಲು ಸಹಾಯವಾಗುವಂತೆ ಅಂತರ್ಜಾಲದ ಮಾಹಿತಿಯನ್ನೂ ನೀಡಿದ್ದಾರೆ