ಅಂಡಮಾನ್ ನ ಸೆಲ್ಯೂಲರ್ ಜೈಲಿನಲ್ಲಿ ನರಕ ಯಾತನೆ ಅನುಭವಿಸಿದ ಅನೇಕ ಕ್ರಾಂತಿಕಾರಿ ಹೋರಾಟಗಾರರ ಹೆಸರೂ ಇಂದಿನ ಜನಾಂಗಕ್ಕೆ ತಿಳಿದಿಲ್ಲ ಎಂಬ ಕಟು ಸತ್ಯ ನಮ್ಮ ಮುಂದೆ ನಿಚ್ಚಳವಾಗಿ ನಿಲ್ಲುತ್ತದೆ. ಕಾಂಗ್ರೆಸ್ ನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರ ಪೈಕಿ ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲ ಲಜಪತರಾಯ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರನ್ನು ಬರ್ಮಾದ ಮಾಂಡಲೆ ಸೆರಮನೆಯಲ್ಲಿಟ್ಟಿದ್ದರು ಎಂಬುದನ್ನು ಹೊರತುಪಡಿಸಿದರೆ ಮಿಕ್ಕವರನ್ನಾರನ್ನೂ ಹೊರ ದೇಶದ ಸೆರೆಮನೆಯಲ್ಲಿಟ್ಟಿರಲಿಲ್ಲ. ಅಂಡಮಾನ್ ನಲ್ಲಿ ಒಬ್ಬ ಕಾಂಗ್ರೆಸ್ಸಿಗನೂ ಇರಲಿಲ್ಲ ಎಂಬ ಕಟು ಸತ್ಯ ಎಷ್ಟು ಜನರಿಗೆ ತಿಳಿದಿದೆ? ಹೀಗಿರುವಾಗ ಅಂಡಮಾನ್ ಸೆರೆಮನೆಯ ವಾಸಿಯಾಗಿದ್ದ ಬರೀಂದ್ರಕುಮಾರ್ ಘೋಷ್ ರವರ ಅನುಭವವನ್ನು ಕನ್ನಡಿಗರ ಮುಂದೆ ಇದೆ.