“ಆಧ್ಯಾತ್ಮಿಕ ಕಥೆಗಳು” ಎಂಬುದರ ಅರಿವು ಸ್ವಲ್ಪಮಟ್ಟಿಗಾದರೂ ಮನಮುಟ್ಟಬಹುದು ಎಂದು ತಿಳಿದು ಈ ಪ್ರಯತ್ನವನ್ನು ಮಾಡಿರುತ್ತೇನೆ. ಈ ಕೃತಿಯಲ್ಲಿರುವ ಕಥೆಗಳನ್ನು ವಿವಿಧ ಮಠಾಧೀಶರುಗಳು ಗುರುಗಳು/ಸಜ್ಜನರುಗಳು ಅನೇಕ ರೀತಿಯ ಉದಾಹರಣೆಯೊಂದಿಗೆ ಸಮಾಜದ ಜನತೆ ಆಧ್ಯಾತ್ಮವನ್ನು ಅರಿತುಕೊಳ್ಳುವ ಸಲುವಾಗಿ ಸಂಕ್ಷಿಪ್ತವಾಗಿ ತಿಳಿ ಹೇಳಿರುತ್ತಾರೆ. ಈ ಸಂಗ್ರಹವನ್ನು ಒಟ್ಟುಗೂಡಿಸಿ ಅಧ್ಯಯನ ಮಾಡಿ ನಂತರ ಸ್ಫೂರ್ತಿಗೊಂಡು ಇದನ್ನು ಕೃತಿಯ ರೂಪದಲ್ಲಿ ತಂದಿರುತ್ತೇನೆ.
ಕಳೆದ ಹಲವು ದಶಕಗಳಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಕುರುಡಾಗಿ ಅನುಕರಿಸುವ ಅಭ್ಯಯಿಸುವ ಪ್ರವೃತ್ತಿಯು ನಮ್ಮಲ್ಲಿ ಅದರಲ್ಲೂ ಯುವಪೀಳಿಗೆಗಳಲ್ಲಿ ಬೆಳೆದು ಬರುತ್ತಿದೆ. ಆದ್ದರಿಂದ ನಾವು ಕೂಡಲೆ ಈ ಅಪಾಯಗಳಿಂದ ಪಾರಾಗುವಂತೆ ಎಚ್ಚರಗೊಂಡು ನಮ್ಮ ಹಿಂದಿನವರು ಮಾಡಿಕೊಟ್ಟಿರುವ ಮತ್ತು ಉಳಿಸಿಕೊಟ್ಟಿರುವ ಉಜ್ವಲವಾಗಿರುವ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ಮಾರ್ಗದಲ್ಲಿ ನಡೆಯಲು ಮತ್ತು ಅದರ ನೆಲೆಯಲ್ಲಿ ನಿಲ್ಲುವಂತೆ ಹಾಗೂ ಮುಂದುವರಿಸಿಕೊAಡು ಹೋಗುವಂತೆ ಯುವಪೀಳಿಗೆಗಳಲ್ಲಿ ತಿಳುವಳಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರುಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಆಳವಾಗಿ ಬೇರೂರಿ ಹೆಮ್ಮರವಾಗಿ ಬೆಳೆದು ಅವು ನಮ್ಮ ಈ ಆಧ್ಯಾತ್ಮಿಕ ಮತ್ತುಧಾರ್ಮಿಕ ಸಂಪ್ರದಾಯಗಳನ್ನು ಕಬಳಿಸಿ ಮರೆ ಮಾಡುವುದರಲ್ಲಿ ಸಂದೇಹವಿಲ್ಲ ಆದ್ದರಿಂದ ಸಮಾಜದ ಎಲ್ಲಾ ಆಧ್ಯಾತ್ಮಿಕ ಬಂಧುಗಳು ಮತ್ತು ಯುವ ಪೀಳಿಗೆಯವರು ಇದರ ಉಪಯುಕ್ತತೆ ಮತ್ತು ಪ್ರಯೋಜನವನ್ನು ಪಡೆದುಕೊಳ್ಳಲಿ. ಮುಂದಿನ ಪೀಳಿಗೆಗೆ ತಿಳಿ ಹೇಳಲಿ.