samrudhasahitya

Book Details

ಮಾರ್ಕ್ಸ್ ವಾದದಿಂದ ಮಾನವತೆಯತ್ತ

Pages: 180
Price: 160

ಮಾರ್ಕ್ಸ್‌ವಾದದಲ್ಲಿ ಏನೂ ಹುರುಳಿಲ್ಲವೆಂದೂ, ಮಾರ್ಕ್ಸ್‌ವಾದ, ಮಾರ್ಕ್ಸ್‌ವಾದಿಗಳು ಹಾಗೂ ಪ್ರಸ್ತುತ ಮಾರ್ಕ್ಸ್‌ವಾದದ ಹೆಸರಲ್ಲಿ ನಡೆಯುತ್ತಿರುವ ದಗಲ್ಬಾಜಿತನವನ್ನು ಒಟ್ಟಂದದಲ್ಲಿ ಒಂದೇ ರೀತಿ ಮಾತನಾಡುವ ಅವೈಜ್ಞಾನಿಕ ಕ್ರಮ ನಮ್ಮ ದೇಶದಲ್ಲಿದೆ. ನಮ್ಮ ಚರ್ಚೆ ಮಾರ್ಕ್ಸ್‌ನ ವಿಚಾರಗಳಲ್ಲಿರುವ ದೋಷ ಅಥವಾ ಮಿತಿಗಳನ್ನು ತೋರಿಸುವುದು ಎಂದಾದಾಗ, ಆ ನಿಟ್ಟಿನಲ್ಲಿ ಬಂದ ಕನ್ನಡ ಪುಸ್ತಕಗಳು ತುಂಬಾ ಕಡಿಮೆ ಬಂದಿವೆ ಎನ್ನಬಹುದು. ಈ ಕೊರತೆಯನ್ನು ತುಂಬಿಕೊಡುತ್ತದೆ. ಏಕೆಂದರೆ, ಮನುಷ್ಯನನ್ನು ಮೂಲವಾಗಿ ಆರ್ಥಿಕ ಪ್ರಾಣಿ ಎಂದೇ ಪರಿಗಣಿಸುವ ಮಾರ್ಕ್ಸ್‌, ಸರ್ಪ್ಲಸ್ ವ್ಯಾಲ್ಯೂ ಅಥವಾ ಹೆಚ್ಚುವರಿ ಮೌಲ್ಯವನ್ನು ಆಧರಿಸಿ ಬಂಡವಾಳಶಾಹಿಗಳು ಹೇಗೆ ಕಾರ್ಮಿಕರನ್ನು ಶೋಷಣೆ ಮಾಡುತ್ತಾರೆ ಎನ್ನುವುದನ್ನು ಅವನ ಕಾಲದ ಯೂರೋಪಿನ ಚಿಂತನೆಯಲ್ಲಿ ವಿವರಿಸಿದ್ದಾನೆ.

ಮಾರ್ಕ್ಸ್‌ ಏನಾದರೂ ನಮ್ಮ ಭಾರತದಂತಹ ಏಷ್ಯಾ ದೇಶಗಳಲ್ಲಿ ಬಂದು ಓಡಾಡಿದಿದ್ದರೆ, ಇಲ್ಲಿಯ ಯೂರೋಪಿಗಿಂತ ತುಂಬಾ ಹಳೆಯ ಸಾಮಾಜಿಕ ರೂಪಕಲ್ಪನೆಯನ್ನು ಕುರಿತು ತಿಳಿಯಬಹುದಾಗಿತ್ತು. ಭಾರತದಲ್ಲಿ 5000 ವರ್ಷಗಳ ಸಾಮಾಜಿಕ ರಚನೆಯಿದೆ. ಅದರ ಪರಸ್ಪರ ಉತ್ಪಾದನೆಯ ಮಾದರಿಗಳು, ಪರಸ್ಪರ ಸಹಕಾರದ ಮಾದರಿಗಳು ಒಂದಕ್ಕೊಂದು ಪೂರಕವಾಗಿ ನಿಲ್ಲಬಲ್ಲ ಮಾದರಿಗಳೆಂಬ ಯಾವುದೇ ಪರಿಕಲ್ಪನೆ ಮಾರ್ಕ್ಸ್‌ಗೆ ಇರಲಿಲ್ಲ. ಹಾಗಾಗಿ, ಏಷ್ಯಾ ಹಾಗೂ ಭಾರತದಂತಹ ಪ್ರಾಚೀನ ವ್ಯವಸ್ಥೆಗಳ ಬಗ್ಗೆ ಮಾರ್ಕ್ಸ್‌ ಬರೆದಿದ್ದಾನೆಂದು ಕೆಲವರು ಹೇಳುತ್ತಾರೆ. ಆದರೆ ಅದರಲ್ಲಿ ನಾನು ಕೆಲವನ್ನು ಓದಿರುವುದರಿಂದ, ಅವುಗಳಲ್ಲಿ ತುಂಬಾ ತೆಳುವೂ, ಆಳಕ್ಕಿಳಿಯದ ಗ್ರಹಿಕೆ ಇದೆ ಎಂದು ತಿಳಿದುಬಂದಿದೆ.