ಭಾರತದ ರಾಜಕೀಯದಲ್ಲಿ ಅನೇಕ ಮಹತ್ತರವಾದ ಪಾತ್ರ ಮತ್ತು ಕೊಡುಗೆಗಳನ್ನು ಅನೇಕ ಗಣ್ಯರಿಂದ ನೀಡಿರುವುದನ್ನು ನಾವು ನೋಡಬಹುದು ಆದರೆ ಕೆಲವರು ಪ್ರಮುಖ ವ್ಯಕ್ತಿಗಳಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇನ್ನು ಕೆಲವರು ತ್ಯಾಗ ಬಲಿದಾನಗಳನ್ನು ನೀಡಿದರು ಅವರ ಹೆಸರು ಮುನ್ನೆಲೆಗೆ ಬರಲಿಲ್ಲ ಮತ್ತು ಕೆಲವರು ನೆನಪಿನಲ್ಲಿ ಸಹ ಉಳಿಯಲಿಲ್ಲ. ಇದು ಒಂದು ಕಥೆಯಾದರೆ ಇನ್ನು ಕೆಲವರು ಯಾವುದೇ ರೀತಿಯ ತ್ಯಾಗ ಮಾಡದೆ ಅಗ್ರಮಾನ್ಯ ನಾಯಕರಾಗಿ ದೇಶವನ್ನು ನಡೆಸಿ ನಾಯಕರಾಗಿಯೇ ಬಿಟ್ಟರು. ಇಂತಹ ಅಗ್ರಮಾನ್ಯ ನಾಯಕರಲ್ಲಿ ಗಾಂಧೀಜಿ ಪ್ರಮುಖರು ಭಾರತದ ರಾಜಕೀಯದಲ್ಲಿ ಗಾಂಧೀಜಿ ಒರ್ವ ತೂಕ ಅಗ್ರಮಾನ್ಯ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಬಹುಮುಖ್ಯ ಎನಿಸುತ್ತದೆ. ಇವರ ಹೋರಾಟ ಮತ್ತು ಕೊಡುಗೆಗಳ ಕುರಿತು ನಮ್ಮ ಪಠ್ಯಪುಸ್ತಕಗಳಲ್ಲಿ ಅನೇಕ ದಶಕಗಳಿಂದ ಹೇಳುತ್ತಲೇ ಬರುತ್ತಿದ್ದೇವೆ. ಆದರೆ ಇವರ ಇನ್ನೊಂದು ಕೊಡುಗೆಗಳ ಕುರಿತು ದಶಕಗಳ ಸಹ ವಿವರಗಳನ್ನು ಮುಚ್ಚಿಡಲಾಗಿದೆ. ಇಂದು ಭಿನ್ನವಾಗಿದ್ದು ಸತ್ಯದ ಹೋರಾಟಕ್ಕೆ ಬೆಳಕು ಸಹಾಯ ನೀಡಿದೆ ಇದರ ಪರಿಣಾಮ ಇತಿಹಾಸದ ಗರ್ಭದಲ್ಲಿ ಅಡಗಿದ್ದ ಹಲವಾರು ಘಟನೆಗಳು ವಿಚಾರಗಳು ಮೇಲಕ್ಕೆ ಬರುತ್ತಿದೆ. ಈ ರೀತಿಯ ಸತ್ಯಾಂಶದ ವಿಚಾರ ತಿಳಿಸುವ ಕೃತಿ ಇದು. ಹಿಂದುಗಳಿಗೆ ಯಾರು ನಿಜವಾದ ವಿರೋಧಿಗಳಾಗಿದ್ದರು ಮತ್ತು ಅವರು ನಡೆಸಿದ ನೃತ್ಯಗಳು ರಾಜಕೀಯ ನಡೆಗಳು ಪ್ರಯೋಗಗಳು ಅದರಿಂದ ಆದ ಪರಿಣಾಮಗಳು ಈ ಎಲ್ಲಾ ವಿಚಾರಗಳನ್ನು ತಿಳಿಸಿರುವುದು ಈ ಕೃತಿಯ ವಿಶೇಷ.