ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ರಾಜಕೀಯ ನಾಯಕ. ಅವರ ವ್ಯಕ್ತಿತ್ವ ಈ ಶತಮಾನದ ಅಚ್ಚರಿ. ರಾಜಕಾರಣದ ವ್ಯಾಪ್ತಿಯನ್ನು ಮೀರಿದ ಒಬ್ಬ ಯುಗಪುರುಷ. ಭಾರತ ವಿಶ್ವಗುರುವಾಗಬೇಕೆಂಬ ಈ ದೇಶದ ಕೋಟ್ಯಂತರ ಜನರ ಕನಸು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸಾಕಾರಗೊಳ್ಳುತ್ತಿದೆ.
ಒಕ್ಕೂಟ ವ್ಯವಸ್ಥೆಯ ಆಂತರಿಕ ಸತ್ವವನ್ನು ಬಲಗೊಳಿಸುತ್ತಲೇ ವಿದೇಶಾಂಗ ನೀತಿಯಲ್ಲಿ ದೇಶಕ್ಕೆ ಹೊಸ ದಿಕ್ಕನ್ನು ತೋರಿದ ಮೋದಿಯವರು ಅಂತರರಾಷ್ಟ್ರೀಯ ಮಟ್ಟದ ಜನಪ್ರಿಯ ಹಾಗೂ ಅಗ್ರಗಣ್ಯ ನಾಯಕರೂ ಹೌದು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಿಂದೆ ಕಂಡು ಕೇಳರಿಯದಂಥ ಅಭಿವೃದ್ಧಿಯಾಗಿದೆ. “ವಸುಧೈವ ಕುಟುಂಬಕಂ” ಎಂಬ ಆರ್ಷೇಯ ನೀತಿಗೆ ಅನುಗುಣವಾಗಿ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬ ಎಲ್ಲರನ್ನೂ ಒಳಗೊಂಡ ರಾಜಧರ್ಮದ ಪ್ರತಿಪಾದಕ ನರೇಂದ್ರ ಮೋದಿ.
ಮೋದಿ ಆಡಳಿತದ ಮೇಲೆ ಬೆಳಕು ಚೆಲ್ಲುವ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಯಥಾರ್ಥ ವಿವರಣೆಯನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನವನ್ನು “ಆತ್ಮನಿರ್ಭರ ಭಾರತ – ಮೋದಿ ಇದ್ದರೆ ಎಲ್ಲವೂ ಸಾಧ್ಯ” ಈ ಪುಸ್ತಕದಲ್ಲಿ ನಿರೂಪಿಸಿರುವ ವಿಚಾರಗಳು ಅತ್ಯಂತ ಸ್ಪಷ್ಟ ಹಾಗೂ ನಿಖರ ಅಂಕಿ-ಸಂಖ್ಯೆಗಳಿಂದ ಒಡಗೂಡಿವೆ.